ಟೆನಿಸ್‌: ಸುಗಿತಾಗೆ ಆಘಾತ ನೀಡಿದ ಯೂಕಿ ಭಾಂಬ್ರಿ

7

ಟೆನಿಸ್‌: ಸುಗಿತಾಗೆ ಆಘಾತ ನೀಡಿದ ಯೂಕಿ ಭಾಂಬ್ರಿ

Published:
Updated:

ಕವೊಸಿಯುಂಗ್‌, ತೈವಾನ್‌ (ಪಿಟಿಐ): ಗಮನಾರ್ಹ ಪ್ರದರ್ಶನ ನೀಡುತ್ತಿರುವ ಭಾರತದ ಯೂಕಿ ಭಾಂಬ್ರಿ ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಯೂಕಿ 7-6, 7-5ರಲ್ಲಿ ಜಪಾನ್‌ನ ಯೂಯಿಚಿ ಸುಗಿತಾ ಅವರಿಗೆ ಆಘಾತ ನೀಡಿದರು. 

ಏಳನೇ ಶ್ರೇಯಾಂಕ ಹೊಂದಿದ್ದ ಸುಗಿತಾ ಭಾರತದ ಆಟಗಾರ ಹೇರಿದ ಒತ್ತಡವನ್ನು ಮೆಟ್ಟಿ ನಿಲ್ಲಲು ವಿಫಲರಾದರು. ಈ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಚೀ ಫು ವಾಂಗ್‌ ಜೊತೆಗೂಡಿ ಆಡುತ್ತಿರುವ ಯೂಕಿ ಸೆಮಿಫೈನಲ್‌ ತಲುಪಿದರು. ಈ ಜೋಡಿ 6-3, 6-4ರಲ್ಲಿ ಜಪಾನ್‌ನ ಅರತಾ ಒನೊಜಾವ ಹಾಗೂ ಯೂಯಿಚಿ ಸುಗಿತಾ ಎದುರು ಗೆಲುವು ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry