ಟೆನಿಸ್‌: ಸೆಮಿಫೈನಲ್‌ಗೆ ಸಾನಿಯಾ–ಜೀ ಜೆಂಗ್‌

7

ಟೆನಿಸ್‌: ಸೆಮಿಫೈನಲ್‌ಗೆ ಸಾನಿಯಾ–ಜೀ ಜೆಂಗ್‌

Published:
Updated:

ನ್ಯೂಯಾರ್ಕ್‌ (ಐಎಎನ್‌ಎಸ್‌): ಭಾರತದ ಸಾನಿಯಾ ಮಿರ್ಜಾ ಮತ್ತು ಚೀನಾದ ಜೀ ಜೆಂಗ್‌ ಅವರ ಗೆಲುವಿನ ಓಟ ಮುಂದುವರಿದಿದೆ. ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಹತ್ತನೇ ಶ್ರೇಯಾಂಕದ ಈ ಜೋಡಿ ಸೆಮಿಫೈನಲ್‌ ತಲುಪಿದೆ.ಕ್ವಾರ್ಟರ್‌ ಫೈನಲ್‌ ಸೆಣಸಾಟದಲ್ಲಿ ಸಾನಿಯಾ–ಜೆಂಗ್‌ 6–4, 7–6ರ ನೇರ ಸೆಟ್‌ಗಳಿಂದ ಚೀನಾದ ಸೂ ವೇಯಿ ಹಿಸಿಯ್‌– ಶಾಯುಯಿ ಪೇಂಗ್‌ ಎದುರು ಗೆಲುವು ಸಾಧಿಸಿದರು.ನಾಲ್ಕನೇ ಶ್ರೇಯಾಂಕ ಹೊಂದಿರುವ ಚೀನಾದ ಆಟಗಾರ್ತಿಯರು ಒಂದು ಗಂಟೆ 50 ನಿಮಿಷ ನಡೆದ ಹೋರಾ­ಟದಲ್ಲಿ ಪ್ರಬಲ ಪ್ರತಿರೋಧ ಒಡ್ಡಿದರು. ಮೊದಲ ಸೆಟ್‌ನಲ್ಲಿ ಸಾನಿಯಾ–ಜೆಂಗ್‌ 45 ನಿಮಿಷ ಪೈಪೋಟಿ ನಡೆಸಿ ಗೆಲುವು ಪಡೆದರು. ಆದರೆ, ಎರಡನೇ ಸೆಟ್‌ನಲ್ಲಿ ಎರಡೂ ಕಡೆಯಿಂದ ಸಾಕಷ್ಟು ಹೋರಾಟ ಮೂಡಿ ಬಂತು. ಹತ್ತನೇ ಶ್ರೇಯಾಂಕದ ಜೋಡಿ ಕೆಲ ಅನಗತ್ಯ ತಪ್ಪುಗಳನ್ನು ಎಸಗಿದ ಕಾರಣ ಹಲವು ಪಾಯಿಂಟ್‌ಗಳು ಚೀನಾ ಆಟಗಾರ್ತಿಯರ ಪಾಲಾದವು.ಅಮೆರಿಕ ಓಪನ್‌ ಟೂರ್ನಿಯಲ್ಲಿ ಸಾನಿಯಾ ಸೆಮಿಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು. ಹೋದ ವರ್ಷದ ಆಸ್ಟ್ರೇಲಿಯಾ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿ-­ಯಲ್ಲಿ ಸೆಮಿ ಫೈನಲ್‌ ಪ್ರವೇಶಿ­ಸಿದ್ದರು. 2011ರಲ್ಲಿ ಫ್ರೆಂಚ್‌ ಓಪನ್‌ ಫೈನಲ್, ವಿಂಬಲ್ಡನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದರು.ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್‌ ಪೇಸ್‌ ಹಾಗೂ ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಅವರು ಈಗಾಗಲೇ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಅಲ್ಲಿ ಅಗ್ರ ಶ್ರೇಯಾಂಕದ ಅಮೆರಿಕದ ಬಾಬ್‌ ಹಾಗೂ ಮೈಕ್‌ ಬ್ರಯಾನ್‌ ಸಹೋದ­ರರ ಎದುರು ಹೋರಾಟ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry