ಶುಕ್ರವಾರ, ಮೇ 7, 2021
20 °C

ಟೆನಿಸ್: ಅಂತಿಮ ಘಟ್ಟಕ್ಕೆ ಸೌಜನ್ಯಾ, ಫೈನಲ್‌ಗೆ ಮೋಹಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೊಗಸಾದ ಪ್ರದರ್ಶನ ನೀಡಿದ ತಮಿಳುನಾಡಿನ ಮೋಹಿತ್ ಮಯೂರ್ ಇಲ್ಲಿ ನಡೆಯುತ್ತಿರುವ ಜೆಜಿಐ-ಎಐಟಿಎ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದರು.ಇಲ್ಲಿನ ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೋಹಿತ್ 6-1, 6-2ರಲ್ಲಿ ತಮ್ಮ ರಾಜ್ಯದವರೇ ಆದ ಮೊಹಮ್ಮದ್ ಫರೀಜ್ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು.ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಆಂಧ್ರ ಪ್ರದೇಶದ ಸಕೇತ್ ಮೈನಿಯಾ 3-6, 6-4, 7-5ರಲ್ಲಿ ತಮಿಳುನಾಡಿನ ವಿಜಯ್ ಸುಂದರ್ ಪ್ರಕಾಶ್ ಅವರನ್ನು ಸೋಲಿಸಿದರು.ಫೈನಲ್ ಪಂದ್ಯದಲ್ಲಿ ಮೋಹಿತ್ ಹಾಗೂ ಸಕೇತ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.ಇದೇ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್ ನಾಲ್ಕರ ಘಟ್ಟದ ಪಂದ್ಯದಲ್ಲಿ ಮೊಹಮ್ಮದ್ ಫರೀಜ್-ವಿಜಯ್ ಸುಂದರ್ ಜೋಡಿ 6-0, 6-4ರಲ್ಲಿ ಕಿರಣ್ ನಂದ ಕುಮಾರ್-ರವಿ ಕಿರಣ್ ಭಟ್ ಮೇಲೂ, ಇನ್ನೊಂದು ಸೆಮಿಫೈನಲ್‌ನಲ್ಲಿ ಇಲ್ವಿನ್ ಆ್ಯಂಟೋನಿ-ಮೋಹಿತ್ ಮಯೂರ್ 6-4, 6-1ರಲ್ಲಿ ಕರ್ನಾಟಕದ ವಿನೋದ್ ಗೌಡ-ದೆಹಲಿಯ ಸೌರಭ್ ಸಿಂಗ್ ವಿರುದ್ಧವೂ ಗೆಲುವು ಸಾಧಿಸಿ ಅಂತಿಮ ಘಟ್ಟ ಪ್ರವೇಶಿಸಿದರು.ಫೈನಲ್‌ಗೆ ನತಾಷಾ-ಸೌಜನ್ಯಾ: ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಗೋವಾದ ನತಾಷಾ ಹಾಗೂ ಆಂಧ್ರ ಪ್ರದೇಶದ ಸೌಜನ್ಯಾ ಭಾವಿಶೆಟ್ಟಿ ಫೈನಲ್‌ಗೆ ಲಗ್ಗೆ ಇಟ್ಟರು. ಸೆಮಿಫೈನಲ್‌ನಲ್ಲಿ ನತಾಷಾ 6-4, 6-3ರಲ್ಲಿ ಜೀನಬ್ ಅಲಿ ಸಜ್ಜದ್ ಮೇಲೂ, ಸೌಜನ್ಯಾ 7-6, 7-6ರಲ್ಲಿ ಟ್ರೀಟಾ ಭಟ್ಟಾಚಾರ್ಯ ವಿರುದ್ಧವೂ ಗೆಲುವು ಪಡೆದರು. ಡಬಲ್ಸ್ ವಿಭಾಗದಲ್ಲಿ ಶರ್ಮದಾ ಬಾಲು-ಶೀತಲ್ ಗೌತಮ್ ಜೋಡಿ 6-1, 6-3ರಲ್ಲಿ ಎ. ಅಭಿಲಾಷಾ-ಯು. ಶಲಾಕಾ ಮೇಲೆ ಗೆದ್ದು ಫೈನಲ್ ತಲುಪಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.