ಟೆನಿಸ್ : ಅಗ್ರಸ್ಥಾನದಲ್ಲಿ ಮುಂದುವರಿದ ಸಾನಿಯಾ ಮಿರ್ಜಾ

7

ಟೆನಿಸ್ : ಅಗ್ರಸ್ಥಾನದಲ್ಲಿ ಮುಂದುವರಿದ ಸಾನಿಯಾ ಮಿರ್ಜಾ

Published:
Updated:

ನವದೆಹಲಿ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ವಿಭಾಗದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದು ವರಿದಿದ್ದಾರೆ.    ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಸೋಮ ವಾರ ಬಿಡುಗಡೆಯಾದ ಡಬ್ಲ್ಯುಟಿಎ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 11,395 ಪಾಯಿಂಟ್ಸ್‌ ಹೊಂದಿದ್ದಾರೆ.  ಮಾರ್ಟಿ ನಾ 11,355 ಪಾಯಿಂಟ್ಸ್‌ ಗಳಿಸಿದ್ದಾರೆ. ಇವರಿಬ್ಬರೂ ಸೇರಿ  ಒಟ್ಟು 26 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಹೋದ ವಾರ ಅವರು ಬ್ರಿಸ್ಟೆನ್‌ನಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು.  ಆ ಮೂಲಕ ಹೊಸ ವರ್ಷದ ಆರಂಭವನ್ನು ಭರ್ಜರಿಯಾಗಿ ಮಾಡಿ ದ್ದರು. ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ  9ನೇ ಸ್ಥಾನ ದಲ್ಲಿದ್ದರೆ ಬ್ರೆಜಿಲ್‌ನ ಮಾರ್ಸೆಲೊ ಮೆಲೊ ಅಗ್ರಸ್ಥಾನದಲ್ಲಿದ್ದಾರೆ.ಸಿಂಗಲ್ಸ್‌ನಲ್ಲಿ ಯೂಕಿ ಭಾಂಬ್ರಿ ಎರಡು ಸ್ಥಾನಗಳಲ್ಲಿ ಕುಸಿತ ಕಂಡು 95ನೇ ಸ್ಥಾನದಲ್ಲಿದ್ದಾರೆ.  ಸಾಕೇತ್‌ ಮೈನೇನಿ 168ನೇ ಸ್ಥಾನ ಹೊಂದಿದ್ದಾರೆ. ಸೋಮದೇವ್‌ ದೇವವರ್ಮನ್‌ 173ನೇ ಸ್ಥಾನದಲ್ಲಿದ್ದಾರೆ. ಸರ್ಬಿಯಾದ ನೊವಾಕ್‌ ಜೊಕೊ ವಿಚ್‌ ಅಗ್ರಸ್ಥಾನದಲ್ಲಿ ಮುಂದು ವರಿದಿದ್ದಾರೆ. ಆ್ಯಂಡಿ ಮರ್ರೆ ಹಾಗೂ ರೋಜರ್‌ ಫೆಡರರ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry