ಟೆನಿಸ್: ಅಭಿಮಾನ್ಷು, ಶ್ವೇತಾಗೆ ಪ್ರಶಸ್ತಿ

7

ಟೆನಿಸ್: ಅಭಿಮಾನ್ಷು, ಶ್ವೇತಾಗೆ ಪ್ರಶಸ್ತಿ

Published:
Updated:

ಮೈಸೂರು:  ಅಸ್ಸೋಂನ ಶ್ರೇಯಾಂಕರಹಿತ ಆಟಗಾರ  ಅಭಿಮಾನ್ಷು ಬೋರ್‌ಠಾಕೂರ್ ಮತ್ತು ತಮಿಳುನಾಡಿನ ಶ್ವೇತಾ ಶ್ರೀಹರಿ ಶುಕ್ರವಾರ ಮೈಸೂರು ಟೆನಿಸ್ ಕ್ಲಬ್‌ನಲ್ಲಿ ಮುಕ್ತಾಯವಾದ ಎಐಟಿಎ-ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದ `ಬಸಂತ್ ಕಪ್ -2012~ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 18 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಆಕರ್ಷಕ ಫೋರ್‌ಹ್ಯಾಂಡ್ ಆಟ ಪ್ರದರ್ಶಿಸಿದ ಅಸ್ಸಾಮಿ ಹುಡುಗ ಅಭಿಮಾನ್ಷು ಬೋರ್‌ಠಾಕೂರ್ 6-2, 6-2ರಿಂದ ತಮಿಳುನಾಡಿನ ಎಂ. ಫಹಾದ್ ವಿರುದ್ಧ ಜಯಗಳಿಸಿದರು.

ಬಾಲಕಿಯರ ಫೈನಲ್ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ತಮಿಳುನಾಡಿನ ಶ್ವೇತಾ ಶ್ರೀಹರಿ 6-3, 6-2ರಿಂದ  ದೆಹಲಿಯ ಸ್ಮೃತಿ ವಿರುದ್ಧ ಜಯಿಸಿ, ಪ್ರಶಸ್ತಿ ಗಳಿಸಿದರು.ದೀಪಕ್, ಶಮೀಮಾಗೆ ಪ್ರಶಸ್ತಿ: ಉತ್ತರ ಪ್ರದೇಶದ ಅಗ್ರಶ್ರೇಯಾಂಕದ ಆಟಗಾರ ದೀಪಕ್ ವಿಶ್ವಕರ್ಮ  16 ವರ್ಷದೊಳಗಿನ ಬಾಲಕರ ಫೈನಲ್‌ನಲ್ಲಿ 6-3, ನಾಡಿನ ಐ.ಬಿ. ಅಕ್ಷಯ್ ವಿರುದ್ಧ ಗೆದ್ದರು.ಬಾಲಕಿಯರ ಫೈನಲ್‌ನಲ್ಲಿ ತಮಿಳುನಾಡಿನ ಎ. ಶಮೀಮಾ 6-4, 6-3ರಲ್ಲಿ ದೆಹಲಿ ಸ್ಮೃತಿ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry