ಟೆನಿಸ್: ಎರಡನೇ ಸುತ್ತಿಗೆ ಸಾನಿಯಾ-ಬ್ರಯಾನ್

7

ಟೆನಿಸ್: ಎರಡನೇ ಸುತ್ತಿಗೆ ಸಾನಿಯಾ-ಬ್ರಯಾನ್

Published:
Updated:
ಟೆನಿಸ್: ಎರಡನೇ ಸುತ್ತಿಗೆ ಸಾನಿಯಾ-ಬ್ರಯಾನ್

ಮೆಲ್ಬರ್ನ್ (ಪಿಟಿಐ): ಅಮೆರಿಕದ ಬಾಬ್ ಬ್ರಯಾನ್ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಆಡುತ್ತಿರುವ ಸಾನಿಯಾ ಮಿರ್ಜಾ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ-ಬ್ರಯಾನ್ 6-2, 6-2ರಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟ್ರಾಸರ್ ಹಾಗೂ ಲ್ಯೂಕ್ ಸವಿಲೆ ಎದುರು ಗೆಲುವು ಸಾಧಿಸಿದರು.ಈ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಭಾರತ-ಅಮೆರಿಕದ ಜೋಡಿ ಕೇವಲ 50 ನಿಮಿಷಗಳಲ್ಲಿ ಎದುರಾಳಿಗೆ ಜೋಡಿಗೆ ಸೋಲುಣಿಸಿತು. ಡಬಲ್ಸ್‌ನಲ್ಲಿ ವಿಶ್ವದ ಶ್ರೇಷ್ಠ ಆಟಗಾರ ಎನಿಸಿರುವ ಬಾಬ್ ಮೂರೂ ಬ್ರೇಕ್ ಪಾಯಿಂಟ್‌ಗಳಲ್ಲಿ ಯಶಸ್ಸು ಕಂಡರು. ಸಾನಿಯಾ-ಬ್ರಯಾನ್ ಅವರಿಗೆ ಎರಡನೇ ಸುತ್ತಿನ ಪಂದ್ಯದಲ್ಲಿ ಕಠಿಣ ಎದುರಾಳಿ ಸಿಗುವ ಸಾಧ್ಯತೆ ಇದೆ.ಆದರೆ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಸಾನಿಯಾ ಈಗಾಗಲೇ ಸೋಲು ಕಂಡಿದ್ದಾರೆ. ಅಮೆರಿಕದ ಬೆಥನಿ ಮಾಟೆಕ್ ಜೊತೆಗೂಡಿ ಆಡಿದ ಸಾನಿಯಾ ಮೊದಲ ಸುತ್ತಿನ ಪಂದ್ಯದಲ್ಲಿ 6-7, 3-6ರಲ್ಲಿ ಸ್ಪೇನ್‌ನ ಸಿಲಿವಿಯಾ ಸೋಲರ್ ಹಾಗೂ ಕಾರ್ಲಾ ಸಾರೆಜ್ ನಾವಾರೊ ಎದುರು ಪರಾಭವಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry