ಟೆನಿಸ್: ಕರ್ನಾಟಕದ ಆದಿಲ್‌ಗೆ ಮುನ್ನಡೆ

7

ಟೆನಿಸ್: ಕರ್ನಾಟಕದ ಆದಿಲ್‌ಗೆ ಮುನ್ನಡೆ

Published:
Updated:

ಮುಂಬೈ (ಪಿಟಿಐ): ಕರ್ನಾಟಕದ ಆದಿಲ್ ಕಲ್ಯಾಣ್‌ಪುರ್ ಇಲ್ಲಿ ನಡೆಯುತ್ತಿರುವ ಆರನೇ ರಮೇಶ್ ದೇಸಾಯಿ ಸ್ಮರಣಾರ್ಥ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ 12 ವರ್ಷದೊಳಗಿನ ಬಾಲಕರ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ.ಆದಿಲ್ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಮಹಾರಾಷ್ಟ್ರದ ವಿಕ್ರಾಂತ್ ಮೆಹ್ತಾ ಅವರನ್ನು 6-0, 6-2 ರಿಂದ ಲೀಲಾಜಾಲವಾಗಿ ಸೋಲಿಸಿದರು.ಆಂಧ್ರ ಪ್ರದೇಶದ ಅಭಿಮನ್ಯು ವಾನೆಮ್‌ರೆಡ್ಡಿ 6-0, 6-1ರಿಂದ ದೆಹಲಿಯ ಶಿವಾಂಕ್ ಭಟ್ನಾಗರ್ ಅವರನ್ನು ಸೋಲಿಸಿ ಹದಿನಾರರ ಘಟ್ಟ ತಲುಪಿದರು. ಕರ್ನಾಟಕದ ಪೂರ್ವಿ ಪಾಟೀಲ್ ಹನ್ನೆರಡು ವರ್ಷ ವಯಸ್ಸಿನೊಳಗಿನ ಬಾಲಕಿಯರ ವಿಭಾಗದ ಮೊದಲ ಸುತ್ತಿನಲ್ಲಿ  ಮಹಾರಾಷ್ಟ್ರದ ಮುಸ್ಕಾನ್ ಅವರನ್ನು 7-6, 6-2 ರಿಂದ ಸೋಲಿಸಿ ಮುನ್ನಡೆ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry