ಟೆನಿಸ್: ಗಾಯದ ಸಮಸ್ಯೆ; ಮಿಶ್ರ ಡಬಲ್ಸ್‌ನಿಂದ ಹಿಂದೆ ಸರಿದ ಪೇಸ್...

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಟೆನಿಸ್: ಗಾಯದ ಸಮಸ್ಯೆ; ಮಿಶ್ರ ಡಬಲ್ಸ್‌ನಿಂದ ಹಿಂದೆ ಸರಿದ ಪೇಸ್...

Published:
Updated:

ನ್ಯೂಯಾರ್ಕ್ (ಪಿಟಿಐ/ಐಎಎನ್‌ಎಸ್): ಉತ್ತಮ ಪ್ರದರ್ಶನ ಮುಂದುವರಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಅಗ್ರ ಶ್ರೇಯಾಂಕದ ಜೊಕೊವಿಚ್ 7-6, 6-7, 6-0, 3-0ರಲ್ಲಿ (ನಿವೃತ್ತಿ) ತಮ್ಮ ದೇಶದವರೇ ಆದ ಜಂಕೊ ತಿಪ್ಸೊರೊವಿಕ್ ಅವರಿಗೆ ಸೋಲುಣಿಸಿ ಈ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಟಗಾರ ಎನ್ನುವ ಕೀರ್ತಿ ಪಡೆದರು.ಪುರುಷರ ವಿಭಾಗದ ಇನ್ನೊಂದು ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-4, 6-3, 6-3ರಲ್ಲಿ ಫ್ರಾನ್ಸ್‌ನ  ಜೊ ವಿಲ್ಫ್ರೆಡ್ ಸೊಂಗಾ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು. ಇದೇ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಆ್ಯಂಡಿ ರ‌್ಯಾಡಿಕ್ 6-3, 6-4, 3-6, 6-3ರಲ್ಲಿ ಸ್ಪೇನ್‌ನ ಡೇವಿಡ್ ಫೆರರ್ ಮೇಲೂ, ಆತಿಥೇಯ ದೇಶದ ಜಾನ್ ಇಸ್ನೆರ್ 7-6, 3-6, 7-6, 7-6ರಲ್ಲಿ ಫ್ರಾನ್ಸ್‌ನ ಗಿಲಿಸ್ ಸಿಮೊನ್ ವಿರುದ್ಧವೂ ಗೆಲುವು ಸಾಧಿಸಿದರು.ಸೆಮಿಫೈನಲ್‌ಗೆ ಸೆರೆನಾ, ವೊಜ್‌ನಿಯಾಕಿ: ಇದೇ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ 7-5, 6-4 ನೇರ ಸೆಟ್‌ಗಳಲ್ಲಿ ರಷ್ಯಾದ ಅನಸ್ತೇಸಿಯಾ ಪವೆಲುಂಚೆಕೊವಾ ಮೇಲೂ, ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್‌ನಿಯಾಕಿ 6-1, 7-6ರಲ್ಲಿ ಆ್ಯಂಡ್ರಿಯಾ ಪೆಟ್ಕೊವಿಕ್ ವಿರುದ್ಧವೂ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.ಆದರೆ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ 6-3, 6-3ರಲ್ಲಿ ರಷ್ಯಾದ ವೆರಾ ಜೊನಾರೇವಾ ವಿರುದ್ಧ ಗೆಲುವು ಪಡೆದು ಅಚ್ಚರಿ ಮೂಡಿಸಿದರು. ಸೆರೆನಾ ಈ ಟೂರ್ನಿಯಲ್ಲಿ ಮೂರು ಬಾರಿ ಚಾಂಪಿಯನ್ ಆಗಿದ್ದಾರೆ.ವಾಕ್ ಓವರ್ ನೀಡಿದ ಪೇಸ್-ವೆಸ್ನಿನಾ: ಮಿಶ್ರ ಡಬಲ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಭಾರತದ ಲಿಯಾಂಡರ್ ಪೇಸ್ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ `ವಾಕ್ ಓವರ್~ ನೀಡಿದರು.ಇದಕ್ಕೆ ಕಾರಣ ಪೇಸ್‌ಗೆ ಅತಿಯಾಗಿ ಕಾಡಿದ ಗಾಯದ ಸಮಸ್ಯೆ. ಪ್ರಶಸ್ತಿಯ ಸನಿಹ ಹೆಜ್ಜೆ ಹಾಕಿದ್ದ ಈ ಜೋಡಿ ನಾಲ್ಕರ ಘಟ್ಟದಲ್ಲಿ ಶ್ರೇಯಾಂಕ ರಹಿತ ಅಮೆರಿಕದ ಮಿಲೆನಿಯಾ ಉಡಿನ್ ಹಾಗೂ ಜಾಕ್ ಸಾಕ್ ಅವರ ಸವಾಲನ್ನು ಎದುರಿಸಬೇಕಿತ್ತು. ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಗಿಸೆಲಾ ಡುಲ್ಕೊ-ಎಡ್ವರ್ಡ್ ಚೇವಾಂಕ್ 6-4, 6-4ನೇರ ಸೆಟ್‌ಗಳಿಂದ ಜೆಕ್ ಗಣರಾಜ್ಯದ ಲುಸಿಯಾ ಹರ್ಡಿಕಾ-ಫ್ರಾಂಟಿಸೆಕ್ ಸೆರ್ಮೆಕ್ ಜೋಡಿಯನ್ನು ಮಣಿಸಿ ಫೈನಲ್ ಪ್ರವೇಶಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry