ಟೆನಿಸ್: ಚೊಚ್ಚಲ ಪ್ರಶಸ್ತಿ ಗೆದ್ದ ಕರುಣ್

ಭಾನುವಾರ, ಜೂಲೈ 21, 2019
22 °C

ಟೆನಿಸ್: ಚೊಚ್ಚಲ ಪ್ರಶಸ್ತಿ ಗೆದ್ದ ಕರುಣ್

Published:
Updated:

ನವದೆಹಲಿ (ಐಎಎನ್‌ಎಸ್): ಕರುಣ್‌ಉದಯ್ ಸಿಂಗ್ ಅವರು ತಮ್ಮ ವೃತ್ತಿಜೀವನದ ಮೊದಲ ಐಟಿಎಫ್ ಟೆನಿಸ್ ಟೂರ್ನಿ ಪ್ರಶಸ್ತಿ  ಗೆದ್ದುಕೊಂಡರು.ಡಿಎಲ್‌ಟಿಎ ಕಾಂಪ್ಲೆಕ್ಸ್ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕರುಣ್ 6-4, 6-2 ರಲ್ಲಿ ಭಾರತದವರೇ ಆದ ವಿಜಯಂತ್ ಮಲಿಕ್ ಅವರನ್ನು ಮಣಿಸಿದರು.ಈ ಮೂಲಕ ಕರುಣ್ ಟೂರ್ನಿಯಲ್ಲಿ ಪ್ರಶಸ್ತಿ ಡಬಲ್ ಗೌರವ ಪಡೆದರು. ಅವರು ರಷ್ಯಾದ ವಿತಾಲಿ ರೆಶೆಟ್ನಿಕೊವ್ ಜೊತೆ ಶುಕ್ರವಾರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು.ಮಲಿಕ್ ವಿರುದ್ಧದ ಫೈನಲ್‌ನಲ್ಲಿ ಕರುಣ್ ಹೆಚ್ಚಿನ ಒತ್ತಡ ಅನುಭವಿಸಲಿಲ್ಲ. ಒಂದು ಗಂಟೆ ಹದಿನೇಳು ನಿಮಿಷಗಳ ಹೋರಾಟದಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ವೇಗದ ಸರ್ವ್ ಮತ್ತು ಶಕ್ತಿಶಾಲಿ ಗ್ರೌಂಡ್‌ಸ್ಟ್ರೋಕ್‌ಗಳ ಮೂಲಕ ಅವರು ಎದುರಾಳಿಯನ್ನು ಕಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry