ಟೆನಿಸ್: ಜೈನ್ ವಿವಿ ಚಾಂಪಿಯನ್

7

ಟೆನಿಸ್: ಜೈನ್ ವಿವಿ ಚಾಂಪಿಯನ್

Published:
Updated:

ಬೆಳಗಾವಿ: ಬೆಂಗಳೂರಿನ ಜೈನ್ ವಿವಿ ತಂಡ, ನಿರೀಕ್ಷೆಯಂತೆ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಮುಕ್ತಾಯಗೊಂಡ ಟೂರ್ನಿಯ ಏಕಪಕ್ಷೀಯವಾದ ಫೈನಲ್ ಪಂದ್ಯಗಳಲ್ಲಿ ಜೈನ್ ವಿವಿ ತಂಡ ಚೆನ್ನೈನ ಮದ್ರಾಸ್ ವಿವಿ ತಂಡವನ್ನು 2-0 ಅಂತರದಿಂದ ಮಣಿಸಿತು.ಮಳೆಯ ಕಾರಣ ಫೈನಲ್ ಪಂದ್ಯಗಳನ್ನು ಸರಳೀಕರಿಸಲಾಯಿತು. ಆರ್. ಭವಾನಿ ವಿರುದ್ಧ ಶಲಾಕಾ ಯು 8-3 ಪಾಯಿಂಟ್‌ಗಳಿಂದ ಜಯ ಸಾಧಿಸಿ ತಂಡಕ್ಕೆ ಭರವಸೆ ನೀಡಿದರು.ಡಬಲ್ಸ್ ವಿಭಾಗದಲ್ಲಿ ಪ್ರಾರ್ಥನಾ ಹಾಗೂ ಪ್ರೇರಣಾ ಜೋಡಿ 8-3ರ ಅಂತರದಿಂದ ಪ್ರೀತಿ ಹಾಗೂ ಭವಾನಿ ಜೋಡಿ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟರು. ಆತಿಥೇಯ ವಿಟಿಯು ತಂಡ, ತಮಿಳುನಾಡಿನ ಕಟ್ಟಂಕುಲತ್ತೂರಿನ ಎಸ್‌ಆರ್‌ಎಂ ವಿವಿ ತಂಡವನ್ನು (2-0) ಸೋಲಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಜೈನ್ ವಿವಿ,  ವಿಟಿಯು ತಂಡವನ್ನು  (2-0) ಸೋಲಿಸಿತು. ಸಿಂಗಲ್ಸ್‌ನಲ್ಲಿ ಶಲಾಕಾ 7-5, 6-3ರಿಂದ ಅಕ್ಷಿತಾ ಬಿ. ರಾಜ್ ವಿರುದ್ಧ, ಡಬಲ್ಸ್‌ನಲ್ಲಿ ಪ್ರಾರ್ಥನಾ ಹಾಗೂ ಪ್ರೇರಣಾ ಜೋಡಿ (6-2, 7-5) ಅಕ್ಷಿತಾ ಹಾಗೂ ಸ್ಫೂರ್ತಿ ಬಿರಾದಾರ ವಿರುದ್ಧ ಜಯ ಸಾಧಿಸಿದರು. ಮದ್ರಾಸ್ ವಿವಿ, 2-0ರಿಂದ ಕಟ್ಟಂಕುಲತ್ತೂರಿನ ಎಸ್‌ಆರ್‌ಎಂ ವಿವಿ ವಿರುದ್ಧ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry