ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ಜೈನ್ ವಿವಿ

7

ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ಜೈನ್ ವಿವಿ

Published:
Updated:

ಬೆಳಗಾವಿ: ಬೆಂಗಳೂರಿನ ಜೈನ್ ವಿವಿ, ಚೆನ್ನೈನ ಮದ್ರಾಸ್ ವಿವಿ ಹಾಗೂ ಕಟ್ಟಂಕುಲತ್ತೂರಿನ ಎಸ್‌ಆರ್‌ಎಂ ವಿವಿ ತಂಡಗಳು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ `ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಟೆನಿಸ್ ಟೂರ್ನಿ~ಯ ಸೆಮಿ ಫೈನಲ್ ತಲುಪಿವೆ.ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈನ ಮದ್ರಾಸ್ ವಿವಿ ತಂಡವು 2-0 ಅಂತರದಿಂದ ಮೈಸೂರು ವಿವಿ ತಂಡವನ್ನು ಸೋಲಿಸಿದೆ. ಸಿಂಗಲ್ಸ್ ವಿಭಾಗದಲ್ಲಿ ಮದ್ರಾಸ್ ವಿವಿಯ ಆರ್. ಭವಾನಿ 6-1, 6-1 ರಿಂದ ಮೈಸೂರು ವಿವಿಯ ಕವಿತಾ ಆರ್.ಎಸ್ ವಿರುದ್ಧ ಗೆಲುವು ಪಡೆದರೆ, ಡಬಲ್ಸ್ ವಿಭಾಗದಲ್ಲಿ ಸುಮಲ್ಯಾ ಹಾಗೂ ಮಾಯಾ ಜೋಡಿ 6-1, 6-4ರಿಂದ ಕವಿತಾ ಹಾಗೂ ರಾಗಿಣಿ ಜೋಡಿ ವಿರುದ್ಧ ಜಯ ಗಳಿಸಿದೆ.ಬೆಂಗಳೂರಿನ ಜೈನ್ ವಿವಿ ತಂಡವು 2-0 ಅಂತರದಿಂದ ಹೈದರಾಬಾದ್‌ನ ಉಸ್ಮಾನಿಯ ವಿವಿ ತಂಡವನ್ನು ಸೋಲಿಸಿದೆ. ಸಿಂಗಲ್ಸ್ ವಿಭಾಗದಲ್ಲಿ ಶಲಾಕಾ ಯು 6-3, 6-1 ರಿಂದ ಸುಷ್ಮಾ ವಿರುದ್ಧ, ಡಬಲ್ಸ್ ವಿಭಾಗದಲ್ಲಿ ಪ್ರಾರ್ಥನಾ ಹಾಗೂ ಪ್ರೇರಣಾ ಜೋಡಿ 6-1, 6-2 ರಿಂದ ಸುಷ್ಮಾ ಹಾಗೂ ಶ್ವೇತಾ ಜೋಡಿ ವಿರುದ್ಧ ಗೆಲವು ಸಾಧಿಸಿದೆ.ಕಟ್ಟಂಕುಲತ್ತೂರಿನ ಎಸ್‌ಆರ್‌ಎಂ ವಿವಿ ತಂಡವು 2-1 ಅಂತರದಿಂದ ಕಾಕಿನಾಡಾದ ಜೆಎನ್‌ಟಿ ವಿವಿ ತಂಡವನ್ನು ಪರಾಭವಗೊಳಿಸಿತು. ಸಿಂಗಲ್ಸ್ ವಿಭಾಗದಲ್ಲಿ ಕಟ್ಟಂಕುಲತ್ತೂರಿನ ಎಸ್‌ಆರ್‌ಎಂ ವಿವಿಯ ಸಂಗೀತಾ ಕೆ.ಎಸ್.   6-1, 6-2 ರಿಂದ ಪ್ರಿಯಾ ವಿರುದ್ಧ ಜಯಿಸಿದರೆ, ಡಬಲ್ಸ್ ವಿಭಾಗದಲ್ಲಿ ಲೇಖಾ ಹಾಗೂ ಚಿತ್ರಾ ಜೋಡಿ 1-6, 6-2, 6-4 ರಿಂದ ಪ್ರಿಯಾ ಹಾಗೂ ಶ್ರೀಯಾನಾ ವಿರುದ್ಧ ಗೆಲವು ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry