ಮಂಗಳವಾರ, ಮೇ 18, 2021
31 °C

ಟೆನಿಸ್: ಡಬಲ್ಸ್‌ನಲ್ಲಿ ಸಾನಿಯಾ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಡಬ್ಲ್ಯುಟಿಎ ರ‌್ಯಾಂಕಿಂಗ್ ಪಟ್ಟಿಯ ಡಬಲ್ಸ್ ವಿಭಾಗದಲ್ಲಿ ಇದೇ ಮೊದಲ ಸಲ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಇದು ಈ ಆಟಗಾರ್ತಿಯ ವೃತ್ತಿ ಜೀವನದ ಶ್ರೇಷ್ಠ ಸಾಧನೆಯಾಗಿದೆ. ಆದರೆ ಸಿಂಗಲ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಈ ಮೊದಲಿನ ಸ್ಥಾನ ಕಳೆದುಕೊಂಡಿದ್ದಾರೆ.ರಷ್ಯಾದ ಎಲೆನಾ ವೆಸ್ನಿನಾ (11ನೇ ಸ್ಥಾನ) ಜೊತೆ ಆಡುತ್ತಿರುವ ಸಾನಿಯಾ ಮಿರ್ಜಾ ಸದ್ಯಕ್ಕೆ 10ನೇ ಸ್ಥಾನದಲ್ಲಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದ ಭಾರತದ ನಾಲ್ಕನೇ ಸ್ಪರ್ಧಿ ಎನಿಸಿದರು.ಎಟಿಪಿ ರ‌್ಯಾಂಕಿಂಗ್ ಪಟ್ಟಿಯಲ್ಲಿ  ಮಹೇಶ್ ಭೂಪತಿ (6ನೇ ಸ್ಥಾನ), ಲಿಯಾಂಡರ್ ಪೇಸ್ (8ನೇ ಸ್ಥಾನ), ಹಾಗೂ ರೋಹನ್ ಬೋಪಣ್ಣ (9ನೇ ಸ್ಥಾನ) ಈಗಾಗಲೇ ಹತ್ತರೊಳಗೆ ಸ್ಥಾನ ಗಳಿಸಿದ್ದಾರೆ. ಹೈದರಾಬಾದ್‌ನ ಆಟಗಾರ್ತಿ ಇದುವರೆಗೂ ಡಬಲ್ಸ್‌ನಲ್ಲಿ ಒಟ್ಟು 12 ಪ್ರಶಸ್ತಿ ಜಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.