ಟೆನಿಸ್: ಪೇಸ್- ಸ್ಟೆಪನೆಕ್‌ಗೆ ಜಯ:ಸೆಮಿಗೆ ಭೂಪತಿ- ರೋಹನ್

7

ಟೆನಿಸ್: ಪೇಸ್- ಸ್ಟೆಪನೆಕ್‌ಗೆ ಜಯ:ಸೆಮಿಗೆ ಭೂಪತಿ- ರೋಹನ್

Published:
Updated:
ಟೆನಿಸ್: ಪೇಸ್- ಸ್ಟೆಪನೆಕ್‌ಗೆ ಜಯ:ಸೆಮಿಗೆ ಭೂಪತಿ- ರೋಹನ್

ಶಾಂಘೈ (ಪಿಟಿಐ): ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.ಏಳನೇ ಶ್ರೇಯಾಂಕ ಪಡೆದಿರುವ ಭಾರತದ ಜೋಡಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 7-6, 6-4 ರಲ್ಲಿ ಎರಡನೇ ಶ್ರೇಯಾಂಕದ ಮ್ಯಾಕ್ಸ್ ಮಿರ್ನಿ ಮತ್ತು ಡೇನಿಯಲ್ ನೆಸ್ಟರ್ ವಿರುದ್ಧ ಅಚ್ಚರಿಯ ಗೆಲುವು ಪಡೆಯಿತು. ಒಂದು ಗಂಟೆ 23 ನಿಮಿಷಗಳ ಕಾಲ ನಡೆದ ಹೋರಾಟ ಬಳಿಕ ಭೂಪತಿ- ರೋಹನ್ ಜಯ ತಮ್ಮದಾಗಿಸಿಕೊಂಡರು.ಇವರು ಮುಂದಿನ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಕಾಲಿನ್ ಫ್ಲೆಮಿಂಗ್ ಮತ್ತು ರಾಸ್ ಹಚಿನ್ಸ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಲಿಯಾಂಡರ್ ಪೇಸ್ ಮತ್ತು ರಾಡೆಕ್ ಸ್ಟೆಪನೆಕ್ ಕೂಡಾ ನಾಲ್ಕರಘಟ್ಟ ಪ್ರವೇಶಿಸಿದರು.ದಿನದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ- ಜೆಕ್ ಗಣರಾಜ್ಯದ ಜೋಡಿ 7-5, 6-7, 10-5 ರಲ್ಲಿ ಕೆನಡಾದ ಮಿಲೋಸ್ ರಾವೊನಿಕ್ ಮತ್ತು ಆಸ್ಟ್ರಿಯದ ಜರ್ಗನ್ ಮೆಲ್ಜರ್ ಎದುರು ಪ್ರಯಾಸದ ಜಯ ಸಾಧಿಸಿತು. ಈ ಹೋರಾಟ ಒಂದು ಗಂಟೆ 36 ನಿಮಿಷಗಳ ಕಾಲ ನಡೆಯಿತು.ಪೇಸ್ ಮತ್ತು ಸ್ಟೆಪನೆಕ್ ಸೆಮಿಫೈನಲ್‌ನಲ್ಲಿ ಎರಿಕ್ ಬಟೊರಾಕ್- ಫಿಲಿಪ್ ಪೆಟ್‌ಶ್ನೆರ್ ಮತ್ತು ಮರಿನ್ ಸಿಲಿಕ್- ಮಾರ್ಸೆಲೊ ಮೆಲೊ ನಡುವಿನ ಪಂದ್ಯದ ವಿಜೇತರನ್ನು ಎದುರಿಸುವರು. ನಾಲ್ಕರಘಟ್ಟಕ್ಕೆ ಮರ‌್ರೆ: ಬ್ರಿಟನ್‌ನ ಆ್ಯಂಡಿ ಮರ‌್ರೆ ಇದೇ ಟೂರ್ನಿಯ    ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಅವರು 4-6, 6-2, 6-3 ರಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಎದುರು ಗೆದ್ದರು.ಇತರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸರ್ಬಿಯದ ನೊವಾಕ್ ಜೊಕೊವಿಚ್ 6-3, 6-3 ರಲ್ಲಿ ಟಾಮಿ ಹಾಸ್ ಎದುರೂ, ರೋಜರ್ ಫೆಡರರ್ 6-3, 6-4 ರಲ್ಲಿ ಮರಿನ್ ಸಿಲಿಕ್ ಮೇಲೂ, ಥಾಮಸ್ ಬೆರ್ಡಿಚ್ 6-3, 7-6 ರಲ್ಲಿ ಜೋ ವಿಲ್ಫ್ರೆಡ್ ಸೋಂಗಾ ವಿರುದ್ಧವೂ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry