ಭಾನುವಾರ, ಜೂನ್ 20, 2021
20 °C

ಟೆನಿಸ್: ಪ್ರೇರಣಾಗೆ ವೈಲ್ಡ್‌ಕಾರ್ಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದ ಪ್ರೇರಣಾ ಭಾಂಬ್ರಿ ಹಾಗೂ ಕೈರಾ ಶ್ರಾಫ್ ಅವರು ಉದ್ಯಾನನಗರಿಯಲ್ಲಿ ಮಾರ್ಚ್ 19ರಿಂದ ನಡೆಯಲಿರುವ ಕ್ಯೂನೆಟ್ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಗೆ `ವೈಲ್ಡ್‌ಕಾರ್ಡ್~ ಪ್ರವೇಶ ಪಡೆದಿದ್ದಾರೆ.ಈ ಆಟಗಾರ್ತಿಯರ ಹೆಸರನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಗುರುವಾರ ಪ್ರಕಟಿಸಿತು. ಈ ಮೊದಲು ಕರ್ನಾಟಕದ ಸ್ಫೂರ್ತಿ ಶಿವಲಿಂಗಯ್ಯ ಹಾಗೂ ಶರ್ಮದಾ ಬಾಲುಗೆ `ವೈಲ್ಡ್‌ಕಾರ್ಡ್~ ನೀಡಲಾಗಿದೆ. ನಗರದ ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಈ ಟೂರ್ನಿ ನಡೆಯಲಿದೆ.ಒಟ್ಟು ಭಾರತದ ನಾಲ್ಕು ಆಟಗಾರ್ತಿಯರಿಗೆ ಈ ಪ್ರವೇಶ ಲಭಿಸಿದಂತಾಗಿದೆ. 17ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.