ಟೆನಿಸ್: ಫೈನಲ್‌ಗೆ ಪೇಸ್- ಭೂಪತಿ

ಬುಧವಾರ, ಜೂಲೈ 17, 2019
26 °C

ಟೆನಿಸ್: ಫೈನಲ್‌ಗೆ ಪೇಸ್- ಭೂಪತಿ

Published:
Updated:

ಲಂಡನ್ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಇಲ್ಲಿ ನಡೆಯುತ್ತಿರುವ ಎಟಿಪಿ ಏಜೊನ್ ಟೆನಿಸ್ ಚಾಂಪಿಯನ್‌ಷಿಪ್‌ನ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿತು.

`ಇಂಡಿಯನ್‌ಎಕ್ಸ್‌ಪ್ರೆಸ್~ ಖ್ಯಾತಿಯ ಭಾರತದ ಜೋಡಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 6-7, 7-6, 10-8 ರಲ್ಲಿ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ ಮತ್ತು ಕೆನಡದ ಡೇನಿಯಲ್ ನೆಸ್ಟರ್ ವಿರುದ್ಧ ಪ್ರಯಾಸದ ಜಯ ಸಾಧಿಸಿತು.

ಪೇಸ್ ಮತ್ತು ಭೂಪತಿ ಫೈನಲ್‌ನಲ್ಲಿ ಅಮೆರಿಕದ ಬಾಬ್ ಹಾಗೂ ಮೈಕ್ ಬ್ರಯನ್ ಸಹೋದರರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಬ್ ಹಾಗೂ ಮೈಕ್ 6-2, 6-1 ರಲ್ಲಿ ಅಲಿವರ್ ಮರಾಷ್- ಮಾರ್ಸಿನ್ ಮಟೋವ್‌ಸ್ಕಿ ಎದುರು ಜಯ ಪಡೆದರು.

ಫೈನಲ್‌ಗೆ ರೋಹನ್: ಭಾರತದ ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜರ್ಮನಿಯಲ್ಲಿ ನಡೆಯುತ್ತಿರುವ ಎಟಿಪಿ ಗೆರಿ ವೆಬರ್ ಎಟಿಪಿ ಟೂರ್ನಿಯ ಫೈನಲ್ ಪ್ರವೇಶಿಸಿದರು.

ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಭಾರತ-ಪಾಕ್ ಜೋಡಿ ಸೆಮಿಫೈನಲ್‌ನಲ್ಲಿ 5-7, 6-3, 11-9 ರಲ್ಲಿ ಕ್ರಿಸ್ಟೋಫರ್ ಕಾಸ್- ಫಿಲಿಪ್ ವಿರುದ್ಧ ಜಯ ಪಡೆಯಿತು. ಫೈನಲ್‌ನಲ್ಲಿ ಈ ಜೋಡಿ ಹಾಲೆಂಡ್‌ನ ರಾಬಿನ್ ಹಾಸ್ ಮತ್ತು ಕೆನಡದ ಮಿಲೋಸ್ ರೋನಿಕ್ ವಿರುದ್ಧ ಪೈಪೋಟಿ ನಡೆಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry