ಸೋಮವಾರ, ಏಪ್ರಿಲ್ 19, 2021
25 °C

ಟೆನಿಸ್: ಫೈನಲ್‌ಗೆ ಪ್ರೇರಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಧಾರವಾಡ: ಪ್ರತಿಭಾನ್ವಿತ ಟೆನಿಸ್ ಆಟಗಾರ್ತಿ ಪ್ರೇರಣಾ ಕಳವಾರ ಸುವಿಧಾ ಇವೆಂಟ್ ಮ್ಯಾನೇಜರ್ಸ್‌ ಆಯೋಜಿಸಿರುವ ಧ್ರುವ ಗಾಂವ್ಕರ್ ‘ಧಾರವಾಡ ಓಪನ್-2011’ ರಾಜ್ಯಮಟ್ಟದ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು.ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಪ್ರೇರಣಾ 8-2ರಿಂದ ಶ್ವೇತಾ ಶೆಟ್ಟಿಯನ್ನು ಸೋಲಿಸಿದರು. ಇನ್ನೊಂದು ಸೆಮಿಫೈನಲ್ನಲ್ಲಿ ಜಿ.ಕೆ. ಶ್ವೇತಾ 8-0ಯಿಂದ ಎ. ಎನ್. ಶ್ರೇಯಾ ವಿರುದ್ಧ ಜಯ ಗಳಿಸಿದರು.19 ವರ್ಷದೊಳಗಿನ ವಯೋಮಿತಿಯಲ್ಲಿ ಅಂತರರಾಷ್ಟ್ರೀಯ ಆಟಗಾರ್ತಿಯಾಗಿರುವ ಜಿ.ಕೆ. ಶ್ವೇತಾ ಭಾನುವಾರ ನಡೆಯುವ ಫೈನಲ್‌ನಲ್ಲಿ ಪ್ರೇರಣಾ ಕಳವಾರ ಅವರನ್ನು ಎದುರಿಸುವರು.ಪುರುಷರ ಡಬಲ್ಸ್ ವಿಭಾಗದಲ್ಲಿ ನಡೆದ ಪಂದ್ಯಗಳಲ್ಲಿ ಹರ್ಷ ಮತ್ತು ವಿಜಯಕುಮಾರ ಅವರು ಚುರುಕಿನ ಆಟವನ್ನು ಆಡುವ ಮೂಲಕ 8-1ರಿಂದ ಶಶಾಂಕ ಮತ್ತು ರುದ್ರೇಶ್ ಜೋಡಿಯನ್ನು ಸೋಲಿಸಿದರು.ಏಡ್ವಿನ್ ಮತ್ತು ಅಮಿತ್ 10-8ರಿಂದ ಪ್ರವೀಣ ಮತ್ತು ನಿಸಾರ್ ವಿರುದ್ಧ ಜಯಗಳಿಸಿದರು. ಸುಜೀತ್ ಮತ್ತು ಹರೀಶ 8-2ರಿಂದ ಮಂಜುನಾಥ ಹಾಗೂ ರವಿರಾಜ್ ವಿರುದ್ಧವೂ,  ರಾಹುಲ್ ಮತ್ತು ವಿಕಾರ್ 9-7ರಿಂದ ಎನ್.ವಿ. ಸುಹಿತ್ ಮತ್ತು ಮೊಹ್ಮದ್ ಶಾಹಬಾಜ್ ವಿರುದ್ಧ ಜಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.