ಟೆನಿಸ್: ಫೈನಲ್‌ಗೆ ಭೂಪತಿ-ಬೋಪಣ್ಣ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಟೆನಿಸ್: ಫೈನಲ್‌ಗೆ ಭೂಪತಿ-ಬೋಪಣ್ಣ

Published:
Updated:

ಸಿನ್ಸಿನಾಟಿ, ಅಮೆರಿಕ (ಪಿಟಿಐ): ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.ಸೆಮಿಫೈನಲ್‌ನಲ್ಲಿ ಭೂಪತಿ ಹಾಗೂ ರೋಹನ್ 6-4, 6-3ರಲ್ಲಿ ಕ್ರೊವೇಷ್ಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್‌ನ ಮಾರ್ಸೆಲ್ ಎದುರು ಜಯ ಗಳಿಸಿದರು.ಕಳೆದ ಬಾರಿ ಈ ಟೂರ್ನಿಯಲ್ಲಿ ಲಿಯಾಂಡರ್ ಪೇಸ್ ಜೊತೆಗೂಡಿ ಆಡಿದ್ದ ಮಹೇಶ್ ಚಾಂಪಿಯನ್ ಆಗಿದ್ದರು. ಆ ಸಾಧನೆಯನ್ನು ಪುನರಾವರ್ತಿಸುವ ಅವಕಾಶ ಈಗ ಭಾರತದ ಈ ಆಟಗಾರನಿಗೆ ಇದೆ. ಭಾರತದ ಈ ಜೋಡಿ ಫೈನಲ್‌ನಲ್ಲಿ ಸ್ವೀಡನ್‌ನ ರಾಬೆರ್ಟ್ ಲಿಂಡ್‌ಸ್ಟೆಡ್ ಹಾಗೂ ರುಮೇನಿಯಾದ ಹೊರಿಯಾ ಟೇಕು ಅವರನ್ನು ಎದುರಿಸಲಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry