ಟೆನಿಸ್: ಫೈನಲ್‌ಗೆ ಮೋಹಿತ್, ರೋಹಿತ್

7

ಟೆನಿಸ್: ಫೈನಲ್‌ಗೆ ಮೋಹಿತ್, ರೋಹಿತ್

Published:
Updated:

ಬೆಂಗಳೂರು: ಮೋಹಿತ್ ರೆಡ್ಡಿ ಹಾಗೂ ರೋಹಿತ್ ಅವರು ಇಲ್ಲಿ ನಡೆಯುತ್ತಿರುವ ಬುಲ್‌ಡಾಗ್ ಎಐಟಿಎ ಟ್ಯಾಲೆಂಟ್ ಸರಣಿಯ ಜೂನಿಯರ್ ಟೆನಿಸ್ ಟೂರ್ನಿಯ 14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೋಹಿತ್ ರೆಡ್ಡಿ 6-2, 6-2ರಲ್ಲಿ ಹೇಮಂತ್ ವಿರುದ್ಧ ಸುಲಭ ಗೆಲುವು ಪಡೆದರು. ಇನ್ನೊಂದು ಪಂದ್ಯದಲ್ಲಿ ರೋಹಿತ್ 6-3, 6-4ರಲ್ಲಿ ವರುಣ್ ವೆಂಕಟ್ ಅವರನ್ನು ಮಣಿಸಿ ಫೈನಲ್ ತಲುಪಿದರು.

12 ವರ್ಷದೊಳಗಿನವರ ವಿಭಾಗದ ನಾಲ್ಕರಘಟ್ಟದ ಪಂದ್ಯಗಳಲ್ಲಿ ಬಿ. ಪ್ರಾಣೇಶ್ 6-4, 4-6, 7-5ರಲ್ಲಿ ಆದಿಲ್ ಕಲ್ಯಾಣಪುರ್ ವಿರುದ್ಧ ಗೆಲುವು ಪಡೆದರೆ, ಅಭಿಮನ್ಯು 6-2, 6-0 ರಲ್ಲಿ ವರುಣ್ ವೆಂಕಟ್ ಅವರನ್ನು ಮಣಿಸಿದರು. ನೂಪುರ್ ಉಮಾಶಂಕರ್  ಮತ್ತು ಸೋಹಾ ಖಾನ್ ಬಾಲಕಿಯರ 14 ವರ್ಷದೊಳಗಿನವರ ವಿಭಾಗದ ಫೈನಲ್ ಪ್ರವೇಶಿಸಿದರು.

ನಲ್ಲಿ ನೂಪುರ್ ಉಮಾಶಂಕರ್ 6-1, 6-2ರಲ್ಲಿ ಪ್ರೇರಣಾ ಕಲ್ವಾರ್ ವಿರುದ್ಧವೂ, ಸೋಹಾ ಖಾನ್ 2-6, 6-3, 7-5ರಲ್ಲಿ ವಾಸವಿ ಮೇಲೂ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದರು. 12 ವರ್ಷದೊಳಗಿನವರ ಸ್ಪರ್ಧೆಯಲ್ಲಿ ವಾಸವಿ 6-2, 6-3ರಲ್ಲಿ ಅಕ್ಷಯ ಎದುರೂ, ಶಿವಾನಿ 6-3, 2-6, 6-3ರಲ್ಲಿ ಧ್ವನಿ ಕುಮಾರ್ ಮೇಲೂ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry