ಶನಿವಾರ, ಮಾರ್ಚ್ 25, 2023
28 °C

ಟೆನಿಸ್: ಫೈನಲ್‌ಗೆ ವಾಸುದೇವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆನಿಸ್: ಫೈನಲ್‌ಗೆ ವಾಸುದೇವ್

ಬೆಂಗಳೂರು: ವಿ.ಆರ್. ವಾಸುದೇವ್ ಅವರು ಇಲ್ಲಿ ನಡೆಯುತ್ತಿರುವ ಟ್ಯಾಲೆಂಟ್ ಸರಣಿಯ ಟೆನಿಸ್ ಟೂರ್ನಿಯ 14 ವರ್ಷ ವಯಸ್ಸಿನೊಳಗಿನ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇಲ್ಲಿನ ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಾಸುದೇವ್ 2-6, 7-6 (4), 7-6(3)ರಲ್ಲಿ ಎಂ, ಅರ್ಜುನ್ ವಿರುದ್ಧ ಗೆಲುವು ಪಡೆದರು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬಿ. ಸಂಯುಕ್ತ 6-4, 6-3ರಿಂದ ಕಾರ್ತಿಕ್ ಅವರನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದರು.



16 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಆ್ಯಂಟೋನಿ ಸವಾಯಿ 6-1, 6-2ರಲ್ಲಿ ವಿಭು ವರ್ಷ ಮೇಲೂ, ಎನ್. ಜಾವೂರ್ 0-6, 7-6(9), 6-4ರಲ್ಲಿ ಅಲೋಕ್ ಅರಾಧ್ಯ ಮೇಲೂ ಗೆಲುವು ಪಡೆದರು. 16 ವರ್ಷದೊಳಗಿನವರ ಬಾಲಕಿಯರ ವಿಭಾಗದ ಸೆಮಿಫೈನಲ್ ಸಿಂಗಲ್ಸ್‌ನಲ್ಲಿ ಅನ್ನಾ ಸಿ. ನೆಲ್ಸೊನ್ 6-1, 6-2ರಲ್ಲಿ ಗೋಪಿಕಾ ಮಧು ವಿರುದ್ಧ, ತ್ಯಾನಾ ಸಿಂಗ್ 6-2, 6-2ರಲ್ಲಿ ಬಿ. ಪ್ರೀತಿ ವಿರುದ್ಧವೂ ಯಶ ಪಡೆದರು. ಇದೇ ವಿಭಾಗದ 14 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಎಂ ಶಿವಾನಿ 6-3, 7-5ರಿಂದ ಬಿ. ಪ್ರೀತಿ ಮೇಲೂ, ಶಿಖಾ ಎನ್. ಸಿಂಗ್ 6-2, 6-4ರಿಂದ ಧ್ವನಿ ಕುಮಾರ್ ವಿರುದ್ಧ ಗೆಲುವು ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.