ಟೆನಿಸ್: ಫೈನಲ್‌ಗೆ ಶಿವಾನಿ ಮಂಜಣ್ಣ

7

ಟೆನಿಸ್: ಫೈನಲ್‌ಗೆ ಶಿವಾನಿ ಮಂಜಣ್ಣ

Published:
Updated:

ಬೆಂಗಳೂರು: ಕರ್ನಾಟಕದ ಶಿವಾನಿ ಮಂಜಣ್ಣ ಇಲ್ಲಿ ನಡೆಯುತ್ತಿರುವ ಎಐಟಿಎ ಸೀರಿಸ್ ಜೂನಿಯರ್ ಟೆನಿಸ್ ಟೂರ್ನಿಯ ಬಾಲಕಿಯರ 14 ವರ್ಷದೊಳಗಿನವರ ವಿಭಾಗದಲ್ಲಿ ಗುರುವಾರ ಫೈನಲ್ ಪ್ರವೇಶಿಸಿದ್ದಾರೆ.ಸೆಮಿಫೈನಲ್ ಪಂದ್ಯದಲ್ಲಿ ಶಿವಾನಿ 3-6, 6-1, 6-1ರಲ್ಲಿ ತಮಿಳುನಾಡಿನ ರಿಷಿಕಾ ರಾವಿ ಎದುರು ಗೆಲುವು ಪಡೆದರು. 12 ವರ್ಷದೊಳಗಿನವರ ವಿಭಾಗದ ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಆತಿಥೇಯ ರಾಜ್ಯದ ಅನಿಕಾ ಕಣ್ಣನ್ 4-6, 7-5, 6-4ರಲ್ಲಿ ಕರ್ನಾಟಕದ ಎನ್.ಪಿ. ಪ್ರತಿಭಾ ಅವರನ್ನು ಸೋಲಿಸಿ ಪ್ರಶಸ್ತಿ ಹಂತಕ್ಕೆ ಲಗ್ಗೆ ಇಟ್ಟರು.ವಂಶಿ ಮಡಿಲಿಗೆ ಪ್ರಶಸ್ತಿ: 12 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಆಂಧ್ರ ಪ್ರದೇಶದ ಎ. ವಂಶಿ ಕೃಷ್ಣ 3-6, 6-4, 6-1ರಲ್ಲಿ ತಮಿಳುನಾಡಿನ ಆ್ಯರನ್ ರಾಜ್ ಎದುರು ಗೆಲುವು ಪಡೆದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry