ಟೆನಿಸ್: ಫೈನಲ್‌ಗೆ ಸಾನಿಯಾ-ಮಾಟೆಕ್

7

ಟೆನಿಸ್: ಫೈನಲ್‌ಗೆ ಸಾನಿಯಾ-ಮಾಟೆಕ್

Published:
Updated:

ಬ್ರಸೆಲ್ಸ್, ಬೆಲ್ಜಿಯಂ (ಪಿಟಿಐ): ಸಾನಿಯಾ ಮಿರ್ಜಾ ಹಾಗೂ ಅವರ ಜೊತೆಗಾರ್ತಿ ಅಮೆರಿಕದ ಬೆಥನಿ ಮಾಟೆಕ್ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಬ್ರಸೆಲ್ಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ-ಮಾಟೆಕ್ 6-3, 4-6, 10-5ರಲ್ಲಿ ಆಸ್ಟ್ರೇಲಿಯಾದ ಅನಾಸ್ತೇಸಿಯಾ ರಾಡಿನೊವಾ ಹಾಗೂ ಕ್ಯಾಸಿ ಡೆಲಕ್ವಾ ಎದುರು ಗೆದ್ದರು. ಇದಕ್ಕೆ ಅವರು ಒಂದು ಗಂಟೆ 21 ನಿಮಿಷ ತೆಗೆದುಕೊಂಡರು.ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಭಾರತ-ಅಮೆರಿಕ ಜೋಡಿ ಮೊದಲ ಸೆಟ್‌ನಲ್ಲಿ ಸುಲಭವಾಗಿಯೇ ಗೆಲುವು ಸಾಧಿಸಿತು. ಆದರೆ ನಂತರದ ಸೆಟ್‌ನಲ್ಲಿ ಭಾರಿ ಪ್ರತಿರೋಧ ಎದುರಿಸಬೇಕಾಯಿತು. ಎರಡನೇ ಸೆಟ್‌ನ ಒಂದು ಹಂತದಲ್ಲಿ ಸಾನಿಯಾ ಹಾಗೂ ಮಾಟೆಕ್ 4-2ರಲ್ಲಿ ಮುನ್ನಡೆ ಹೊಂದಿದ್ದರು.ಆದರೆ ಸತತ ನಾಲ್ಕು ಗೇಮ್ ಗೆದ್ದ ಆಸ್ಟ್ರೇಲಿಯಾ ಜೋಡಿ ಈ ಸೆಟ್ ಜಯಿಸಿ 1-1 ಸಮಬಲಕ್ಕೆ ಕಾರಣವಾಯಿತು. ಹಾಗಾಗಿ ಪಂದ್ಯ ಸೂಪರ್ ಟೈಬ್ರೇಕರ್ ಹಂತ ತಲುಪಿತು. ಇದರಲ್ಲಿ ಭಾರತ-ಅಮೆರಿಕ ಜೋಡಿ ಯಶಸ್ವಿಯಾಯಿತು.ಸಾನಿಯಾ ಈ ವರ್ಷ ಎರಡನೇ ಹಾಗೂ ಒಟ್ಟಾರೆ 14ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry