ಟೆನಿಸ್: ಬಸಪ್ಪಗೆ ಪ್ರಶಸ್ತಿಯ ಗರಿ

7

ಟೆನಿಸ್: ಬಸಪ್ಪಗೆ ಪ್ರಶಸ್ತಿಯ ಗರಿ

Published:
Updated:

ಬೆಂಗಳೂರು: ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಬಸಪ್ಪ ಇಲ್ಲಿ ನಡೆದ ಕರ್ನಾಟಕ ಹಿರಿಯ ಟೆನಿಸ್ ಆಟಗಾರರ ಸಂಸ್ಥೆ ಆಶ್ರಯದ 32ನೇ ವಾರ್ಷಿಕ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ `ಡಬಲ್~ ಸಾಧನೆ ಮಾಡಿದ್ದಾರೆ.ಬಸಪ್ಪ 46-55 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಮೊದಲು ಚಾಂಪಿಯನ್ ಆದರು. ಫೈನಲ್‌ನಲ್ಲಿ ಅವರು ತಮಿಳುನಾಡಿನ ಮೇಘನನಂದನ್ ಅವರನ್ನು ಸೋಲಿಸಿದರು. ಬಳಿಕ ಡಬಲ್ಸ್‌ನಲ್ಲಿ ಮೇಘನಂದನ್ ಜೊತೆಗೂಡಿ 9-3ರಲ್ಲಿ ಆರ್.ಎನ್. ರಮೇಶ್ ಹಾಗೂ ತುಳಸಿರಾಮನ್ ಎದುರು ಗೆದ್ದರು.35-45 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಬೆಂಗಳೂರು ಕ್ಲಬ್‌ನ ಜಿ.ರಮೇಶ್ 6-4, 6-2ರಲ್ಲಿ ಅರುಣ್ ನಿಚಾನಿ ಅವರನ್ನು ಮಣಿಸಿದರು. ಈ ವಯೋಮಿತಿಯ ಡಬಲ್ಸ್‌ನಲ್ಲಿ ಅರುಮುಗಮ್-ಮುರುಗನ್ 3-6, 7-5, 3-1ರಲ್ಲಿ ಪುರುಷೋತ್ತಮ-ಸುಮಂತ್ ಎದುರು ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry