ಟೆನಿಸ್: ಬೋಪಣ್ಣ, ಖುರೇಷಿ ನಿರ್ಗಮನ

ಭಾನುವಾರ, ಜೂಲೈ 21, 2019
21 °C

ಟೆನಿಸ್: ಬೋಪಣ್ಣ, ಖುರೇಷಿ ನಿರ್ಗಮನ

Published:
Updated:

ಈಸ್ಟ್ ಬೋರ್ನ್, ಇಂಗ್ಲೆಂಡ್ (ಪಿಟಿಐ): ಕೆಳ ಶ್ರೇಯಾಂಕದ ಆಟಗಾರರ ಎದುರು ಪ್ರಭಾವಿ ಆಟವಾಡದ ರೋಹನ್ ಬೋಪಣ್ಣ ಹಾಗೂ ಐಸಾಮ್-ಉಲ್-ಹಕ್ ಖುರೇಷಿ ಅವರು ಇಲ್ಲಿ ನಡೆಯುತ್ತಿರುವ ಏಜೊನ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೋಲು ಕಂಡರು.

ಗುರುವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ `ಇಂಡೋ ಪಾಕ್ ಎಕ್ಸಪ್ರೆಸ್~ 5-7, 3-6ರಲ್ಲಿ ಶ್ರೇಯಾಂಕ ರಹಿತ ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವಾ ಮತ್ತು ಇಟಲಿಯ ಆ್ಯಂಡ್ರಿಯಾಸ್ ಸೆಪ್ಪಿ ವಿರುದ್ಧ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿತು.

ರೋಚಕ ಹಣಾಹಣಿಯಿಂದ ಕೂಡಿದ್ದ ಮೊದಲ ಸೆಟ್‌ನಲ್ಲಿ  ಡಿಮಿಟ್ರೊವಾ ಮತ್ತು ಸೆಪ್ಪಿ ಪ್ರಯಾಸದ ಗೆಲುವು ಪಡೆದರು. ಬೋಪಣ್ಣ ಹಾಗೂ ಖುರೇಷಿ ಭಾರಿ ಪ್ರತಿರೋಧ ತೋರಿತಾದರೂ ಗೆಲುವು  ಪಡೆಯುವಲ್ಲಿ ವಿಫಲವಾದರು. ಎರಡನೇ ಸೆಟ್‌ನಲ್ಲಿ ಕರಾರುವಕ್ಕಾಗಿ ಆಡಿದ ಡಿಮಿಟ್ರೊವಾ ಮತ್ತು ಸೆಪ್ಪಿ ಅತ್ಯುತ್ತಮ ಸರ್ವ್ ಹಾಗೂ ರಿಟರ್ನ್‌ಗಳ ಮೂಲಕ ಗೆಲುವಿನ ನಗೆ ಬೀರಿದರು.

ಕಳೆದ ವಾರ ಜರ್ಮನಿಯಲ್ಲಿ ನಡೆದ ಗೆರೆ ವೆಬರ್ ಟೆನಿಸ್ ಟೂರ್ನಿಯಲ್ಲಿ ಬೋಪಣ್ಣ ಹಾಗೂ ಖುರೇಷಿ ಅವರು ಚಾಂಪಿಯನ್ ಆಗಿದ್ದರು. ಈ ಜೋಡಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಕಂಡು ಭಾರತದ ಸವಾಲನ್ನು ಅಂತ್ಯಗೊಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry