ಟೆನಿಸ್: ಬೋಪಣ್ಣ- ವೆಸೆಲಿನ್‌ಗೆ ಸೋಲು

7

ಟೆನಿಸ್: ಬೋಪಣ್ಣ- ವೆಸೆಲಿನ್‌ಗೆ ಸೋಲು

Published:
Updated:

ನ್ಯೂಯಾರ್ಕ್ (ಪಿಟಿಐ): ರೋಹನ್ ಬೋಪಣ್ಣ ಮತ್ತು ಎಡ್ವರ್ಡ್ ರೋಜರ್ ವೆಸೆಲಿನ್ ಜೋಡಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿತು.ಭಾರತ- ಫ್ರಾನ್ಸ್‌ನ ಜೋಡಿ 4-6, 4-6 ರಲ್ಲಿ ಬ್ರಿಟನ್‌ನ ಕಾಲಿನ್ ಫ್ಲೆಮಿಂಗ್ ಮತ್ತು ಜೊನಾಥನ್ ಮರ್ರೆ ಕೈಯಲ್ಲಿ ಪರಾಭವಗೊಂಡಿತು. ಇಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಬೋಪಣ್ಣ- ವೆಸೆಲಿನ್ 12ನೇ ಶ್ರೇಯಾಂಕ ಪಡೆದಿದ್ದ ಎದುರಾಳಿಗಳ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.ಭಾರತ- ಫ್ರಾನ್ಸ್‌ನ ಜೋಡಿ ತನಗೆ ಲಭಿಸಿದ್ದ ಆರು `ಬ್ರೇಕ್ ಪಾಯಿಂಟ್' ಅವಕಾಶಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಯಶ ಸಾಧಿಸಿತು. ಈ ಪಂದ್ಯ 81 ನಿಮಿಷಗಳವರೆಗೆ ನಡೆಯಿತು. ಸೋಲು ಅನುಭವಿಸಿದ ಕಾರಣ ಟೂರ್ನಿಯಲ್ಲಿ ಬೋಪಣ್ಣ ಸವಾಲು ಕೊನೆಗೊಂಡಿದೆ. ಮಿಶ್ರ ಡಬಲ್ಸ್‌ನಲ್ಲಿ ಅವರು ಈ ಮೊದಲೇ ಹೊರಬಿದ್ದಿದ್ದರು.ಇದೀಗ ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಈ ಟೂರ್ನಿಯಲ್ಲಿ ಭಾರತದ ಭರವಸೆ ಎನಿಸಿಕೊಂಡಿದ್ದಾರೆ. ಪೇಸ್- ರಾಡೆಕ್ ಸ್ಟೆಪನೆಕ್ ಮತ್ತು ಸಾನಿಯಾ- ಜೀ ಜೆಂಗ್ ಜೋಡಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry