ಟೆನಿಸ್: ಭಾರತ ಪರಾಭವ

7

ಟೆನಿಸ್: ಭಾರತ ಪರಾಭವ

Published:
Updated:

ನಾಂಥಬುರಿ (ಥಾಯ್ಲೆಂಡ್, ಪಿಟಿಐ): ಸೋಲಿನ ಸರಣಿಯ ಕೊಂಡಿಯನ್ನು ಕಳಚಿಕೊಳ್ಳುವಲ್ಲಿ ವಿಫಲವಾದ ಭಾರತ ತಂಡದವರು ಫೆಡ್ ಕಪ್ ಟೆನಿಸ್ ಏಷ್ಯಾ ಒಸೀನಿಯಾ ಮೊದಲ ಗುಂಪಿನ ಹಣಾಹಣಿಯಲ್ಲಿ ನಿರಾಸೆಗೊಂಡರು.ರುಶ್ಮಿ ಚಕ್ರವರ್ತಿ, ಐಶ್ವರ್ಯಾ ಶ್ರೀವಾಸ್ತವ ಹಾಗೂ ಸಾನಿಯಾ ಮಿರ್ಜಾ ಅವರನ್ನೊಳಗೊಂಡ ಭಾರತ ತಂಡವು ಶುಕ್ರವಾರದ ಪಂದ್ಯದಲ್ಲಿ 1-2ರಲ್ಲಿ ಥಾಯ್ಲೆಂಡ್ ಎದುರು ಸೋಲು ಅನುಭವಿಸಿತು.ಆದ್ದರಿಂದ ‘ಎ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿ ನಿಲ್ಲಬೇಕಾ ಯಿತು. ಇದಕ್ಕೂ ಮುನ್ನ ಭಾರತ ದವರು ಚೀನಾ ಹಾಗೂ ಉಜ್ಬೇಕಿಸ್ತಾನದ ವಿರುದ್ಧವೂ ಸೋಲನುಭವಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry