ಶನಿವಾರ, ಜೂನ್ 19, 2021
27 °C

ಟೆನಿಸ್: ಭೂಪತಿ-ಬೋಪಣ್ಣ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಉತ್ತಮ ಹೋರಾಟ ತೋರಿದ ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಜೋಡಿ ಇಲ್ಲಿ ನಡೆದ ದುಬೈ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಭಾರತದ ಜೋಡಿ 6-4, 3-6, 10-5ರಲ್ಲಿ ಮ್ಯಾರಿಯಸ್ಜ್ ಹಾಗೂ ಮಾರ್ಸಿನ್ ಮಟ್ಕೊವೊಸ್ಕಿ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಭೂಪತಿಗೆ ಲಭಿಸಿದ ನಾಲ್ಕನೇ ದುಬೈ ಓಪನ್ ಟ್ರೋಫಿ ಇದಾಗಿದೆ. ಇದಕ್ಕೂ ಮೊದಲು ಲಿಯಾಂಡರ್ ಪೇಸ್ ಜೊತೆಗೂಡಿ 1998ರಲ್ಲಿ, ಫ್ಯಾಬ್ರಿಕೊ ಸಂತುರೊ ಜೊತೆ 2004ರಲ್ಲಿ ಹಾಗೂ ಮಾರ್ಕ್ ನೊವೆಲ್ಸ್ ಜೊತೆ 2008ರಲ್ಲಿ ಚಾಂಪಿಯನ್ ಆಗಿದ್ದರು. ಬೋಪಣ್ಣಗೆ ಒಲಿದ ಆರನೇ ಎಟಿಪಿ ಪ್ರಶಸ್ತಿ ಇದಾಗಿದೆ.ಮೊದಲ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾದರೂ ಭಾರತದ ಜೋಡಿ ಮುನ್ನಡೆ ಸಾಧಿಸಿತು. ಆದರೆ, ಎರಡನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಭೂಪತಿ-ಬೋಪಣ್ಣ ಸೆಟ್ ಗೆದ್ದುಕೊಂಡರಲ್ಲದೇ ಚಾಂಪಿಯನ್ ಪಟ್ಟ ಸಹ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.