ಗುರುವಾರ , ಜೂನ್ 24, 2021
27 °C

ಟೆನಿಸ್: ಭೂಪತಿ-ಬೋಪಣ್ಣ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಯಾಮಿ (ಪಿಟಿಐ): ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಎರಡನೇ ಸುತ್ತು ತಲುಪಿದ್ದಾರೆ.ಆರನೇ ಶ್ರೇಯಾಂಕ ಪಡೆದಿರುವ ಭೂಪತಿ-ಬೋಪಣ್ಣ ಜೋಡಿ 7-5, 6-3ರಲ್ಲಿ ಆಸ್ಟ್ರಿಯದ ಜುರ್ಗನ್ ಮೆಲ್ಜರ್ ಹಾಗೂ ಇಂಗ್ಲೆಂಡ್‌ನ ಜಾಮಿ ಮುರ‌್ರೆ ಅವರನ್ನು ಸೋಲಿಸಿತು.ಆದರೆ ಸಾನಿಯಾ ಮಿರ್ಜಾ ಹಾಗೂ ಅವರ ಜೊತೆಗಾರ್ತಿ ರಷ್ಯಾದ ಎಲೆನಾ ವೆಸ್ನಿನಾ ಸೋಲು ಕಂಡಿದ್ದಾರೆ. ಅವರು ಮೊದಲ ಸುತ್ತಿನ ಪಂದ್ಯದಲ್ಲಿ 6-1, 1-6, 9-11ರಲ್ಲಿ ರಷ್ಯಾದ ಅನಾಸ್ತೇಸಿಯಾ ಪಾಲಿಚೆಂಕೊವಾ ಹಾಗೂ ಜೆಕ್ ಗಣರಾಜ್ಯದ ಲೂಸಿ ಸಫಾರೋವಾ ಎದುರು ಗೆದ್ದರು.ಮೊದಲ ಸುತ್ತಿನಲ್ಲಿ ಭಾರತ-ರಷ್ಯಾದ ಜೋಡಿ ಮಿಂಚಿನ ಆಟ ತೋರಿತು. ಆದರೆ ಅದೇ ಪ್ರದರ್ಶನ ಮಟ್ಟ ಕಾಯ್ದುಕೊಂಡು ಹೋಗುವಲ್ಲಿ ಈ ಜೋಡಿ ಯಶಸ್ವಿಯಾಗಲಿಲ್ಲ. ಈ ಗೆಲುವಿಗಾಗಿ ಅನಾಸ್ತೇಸಿಯಾ-ಸಫಾರೋವಾ ಜೋಡಿ 66 ನಿಮಿಷ ತೆಗೆದುಕೊಂಡಿತು.ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಎರಡನೇ ಹಂತ ತಲುಪಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.