ಮಂಗಳವಾರ, ಜೂನ್ 15, 2021
23 °C

ಟೆನಿಸ್: ಮುಗ್ಗರಿಸಿದ ಸಾನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಯಾಮಿ (ಪಿಟಿಐ): ಸಾನಿಯಾ ಮಿರ್ಜಾ ಇಲ್ಲಿ ನಡೆಯುತ್ತಿರುವ ಸೋನಿ ಎರಿಕ್ಸನ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯಲ್ಲಿ ಪ್ರಧಾನ ಹಂತ ಪ್ರವೇಶಿಸುವಲ್ಲಿ ವಿಫಲರಾದರು.ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ ಅವರು ಅಮೆರಿಕಾದ ಇರಿನಾ ಫಾಲ್ಕೊನಿ ಎದುರು ಗೆಲುವು ಪಡೆದಿದ್ದರು. ಬುಧವಾರ ನಡೆದ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ 2-6, 4-6ರಲ್ಲಿ ಅಮೆರಿಕದ ಸ್ಲೋಯಾನೆ ಸ್ಪೆಫನ್ಸ್ ಎದುರು ಸೋಲು ಕಂಡರು.ಭಾರತದ ಆಟಗಾರ್ತಿ ಡಬಲ್ಸ್‌ನಲ್ಲಿನ ರಷ್ಯಾದ ಎಲೆನಾ ವೆಸ್ನಿನಾ ಜೊತೆಗೂಡಿ ಆಡಲಿದ್ದಾರೆ. ಕಳೆದ ತಿಂಗಳು ನಡೆದ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಈ ಜೋಡಿ ರನ್ನರ್ ಅಪ್ ಆಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.