ಮಂಗಳವಾರ, ಜನವರಿ 28, 2020
23 °C
ಚುಟುಕು ಗುಟುಕು

ಟೆನಿಸ್: ಶರ್ಮದಾಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕರ್ನಾಟಕದ ಶರ್ಮದಾ ಬಾಲುಇಲ್ಲಿ ನಡೆಯುತ್ತಿರುವ ಗಣೇಶ್ ನಾಯಕ್ ಐಟಿಎಫ್‌ ಮಹಿಳೆಯರ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪರಾಭವಗೊಂಡಿದ್ದಾರೆ.ಮಂಗಳವಾರ ನಡೆದ ಪಂದ್ಯದಲ್ಲಿ ಶರ್ಮದಾ 2–6, 6–1, 4–6 ರಿಂದ ಅಂಕಿತಾ ರೈನಾಗೆ ಶರಣಾದರು.

ಆರ್‌ಸಿಎ ಚುನಾವಣೆ: ಮೋದಿ ಸ್ಪರ್ಧೆ

ಜೈಪುರ (ಪಿಟಿಐ):
ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಅವರು ರಾಜಸ್ತಾನ ಕ್ರಿಕೆಟ್‌       ಸಂಸ್ಥೆ (ಆರ್‌ಸಿಎ) ಚುನಾವಣೆಯಲ್ಲಿ ಸ್ಪರ್ಧಿಸುವುದು      ಖಚಿತವಾಗಿದೆ.‘ಮೋದಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ’ ಎಂದು ಅವರ ವಕೀಲ ಮೆಹ್ಮೂದ್‌ ಅಬ್ದಿ ಮಂಗಳವಾರ ಹೇಳಿದ್ದಾರೆ. ಆರ್‌ಸಿಎ ಚುನಾವಣೆ ಡಿಸೆಂಬರ್‌ 19 ರಂದು ನಡೆಯಲಿದೆ.ಐಪಿಎಲ್‌ನಲ್ಲಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಮೋದಿ ಇದೀಗ ಲಂಡನ್‌ನಲ್ಲಿದ್ದಾರೆ.ಕ್ರಿಕೆಟ್: ಆರ್‌ಟಿಎಸ್ ಅಳವಡಿಕೆಗೆ ಐಸಿಸಿ ನಿರ್ಧಾರ

ದುಬೈ (ಐಎಎನ್‌ಎಸ್/ಸಿಎಮ್‌ಸಿ):
ನ್ಯೂಜಿಲೆಂಡ್‌ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಿಗೆ ರಿಯಲ್‌ ಟೈಮ್ ಸ್ನೀಕೋ ಮೀಟರ್ (ಆರ್‌ಟಿಎಸ್) ಅಳವಡಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನಿರ್ಧರಿಸಿದೆ.ಅಂಪೈರ್‌ ತೀರ್ಪು ಪರಿಶೀಲಿನಾ (ಡಿಆರ್‌ಎಸ್‌) ವ್ಯವಸ್ಥೆಯ ಒಂದು ಭಾಗವಾಗಿ ಆರ್‌ಟಿಎಸ್‌ ನಿಯಮವನ್ನು ಅಳವಡಿಸಲಾಗಿದೆ. ಇದರಿಂದಾಗಿ ಪಂದ್ಯದ ವೇಳೆ ಸ್ಪಷ್ಟವಾದ ತೀರ್ಪು ದೊರೆಯಲಿದೆ ಎಂದು ಐಸಿಸಿ ತಿಳಿಸಿದೆ.

ಪ್ರತಿಕ್ರಿಯಿಸಿ (+)