ಟೆನಿಸ್: ಶಿವಾನಿಗೆ ಪ್ರಶಸ್ತಿ ಡಬಲ್

7

ಟೆನಿಸ್: ಶಿವಾನಿಗೆ ಪ್ರಶಸ್ತಿ ಡಬಲ್

Published:
Updated:

ಬೆಂಗಳೂರು: ಕರ್ನಾಟಕದ ಶಿವಾನಿ ಮಂಜಣ್ಣ ಇಲ್ಲಿ ಮುಕ್ತಾಯವಾದ ಎಐಟಿಎ ಸೀರಿಸ್ ಜೂನಿಯರ್ ಟೆನಿಸ್ ಟೂರ್ನಿಯ ಬಾಲಕಿಯರ 14 ವರ್ಷದೊಳಗಿನವರ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಶಿವಾನಿ 6-0, 6-4ರಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಆಂಧ್ರ ಪ್ರದೇಶದ ಹರ್ಷಾ ಸಾಯಿ ಚಲ್ಲಾ ಎದುರು ಗೆಲುವು ಪಡೆದರು. ಡಬಲ್ಸ್‌ನಲ್ಲಿ ಜಿ.ಎಸ್. ವಾಸವಿ ಜೊತೆ ಆಡಿದ ಶಿವಾನಿ ಅಂತಿಮ ಘಟ್ಟದ ಪಂದ್ಯದಲ್ಲಿ 6-3, 7-5ರಲ್ಲಿ ಹರ್ಷಾ ಸಾಯಿ-ಶಿವಾನಿ ಅಮೇನಿನಿ ಎದುರು ಜಯ ಸಾಧಿಸಿ `ಡಬಲ್~ ಪ್ರಶಸ್ತಿ ತಮ್ಮದಾಗಿಸಿಕೊಂಡರು.12 ವರ್ಷದೊಳಗಿನವರ ಬಾಲಕಿಯರ ವಿಭಾಗದ ಸಿಂಗಲ್ಸ್‌ನ ಫೈನಲ್‌ನಲ್ಲಿ  ಶಿವಾನಿ ಅಮೇನಿನಿ 6-3, 6-3ರಲ್ಲಿ ಕರ್ನಾಟಕದ ಅನಿಕಾ ಕಣ್ಣನ್ ಎದುರು ಗೆಲುವು ಪಡೆದರು. ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಆಂಧ್ರಪ್ರದೇಶದ ಅಮಿತ್ ಬಿ. 6-3, 3-6, 6-0ರಲ್ಲಿ ಮಹಾರಾಷ್ಟ್ರದ ಧ್ರುವ ಎಸ್. ಎದುರು ಜಯಿಸಿ ಪ್ರಶಸ್ತಿ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry