ಟೆನಿಸ್: ಸನಮ್, ವಿಷ್ಣುಗೆ ಜಯ

7

ಟೆನಿಸ್: ಸನಮ್, ವಿಷ್ಣುಗೆ ಜಯ

Published:
Updated:

ತಾಷ್ಕೆಂಟ್ (ಐಎಎನ್‌ಎಸ್): ಭಾರತದ ಡೇವಿಸ್ ಕಪ್ ಆಟಗಾರರಾದ ಸನಮ್ ಸಿಂಗ್ ಮತ್ತು ವಿಷ್ಣುವರ್ಧನ್ ತಾಷ್ಕೆಂಟ್ ಅವರು ಉತ್ತಮ ಪ್ರದರ್ಶನ ನೀಡಿದ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಅರ್ಹತಾ ಹಂತದ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.ಭಾನುವಾರ ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ವಿಷ್ಣುವರ್ಧನ್ 6-7, 6-3, 6-3 ರಲ್ಲಿ ಬೆಲ್ಜಿಯಂನ ಜರ್ಮೈನ್ ಗಿಗೊನನ್ ವಿರುದ್ಧ ಪ್ರಯಾಸದ ಗೆಲುವು ಪಡೆದರು. ಈ ಪಂದ್ಯ ಒಂದು ಗಂಟೆ 51 ನಿಮಿಷಗಳ ಕಾಲ ನಡೆಯಿತು.ಸೋಮವಾರ ನಡೆಯುವ ಅಂತಿಮ ಸುತ್ತಿನ ಪಂದ್ಯದಲ್ಲಿ ಅವರು ಜರ್ಮನಿಯ ಮಾರ್ಟಿನ್ ಎಮ್ರಿಚ್ ವಿರುದ್ಧ ಪೈಪೋಟಿ ನಡೆಸುವರು. ಇದರಲ್ಲಿ ಗೆದ್ದರೆ, ಪ್ರಧಾನ ಹಂತ ಪ್ರವೇಶಿಸುವರು. ದಿನದ ಮತ್ತೊಂದು ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ತೋರಿದ ಸನಮ್ ಸಿಂಗ್ 6-2, 6-4 ರಲ್ಲಿ ಜಾರ್ಜಿಯದ ಅಲೆಕ್ಸಾಂಡರ್ ಮೆಟ್ರೆವೆಲಿ ಅವರನ್ನು ಸೋಲಿಸಿದರು.ಟೂರ್ನಿಯ ಪ್ರಧಾನ ಹಂತದ ಪಂದ್ಯಗಳು ಸೋಮವಾರ ಆರಂಭವಾಗಲಿವೆ. ಭಾರತದ ಯೂಕಿ ಭಾಂಬ್ರಿ ಮೊದಲ ಸುತ್ತಿನ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ಕರೊಲ್ ಬೆಕ್ ಅವರ ಸವಾಲನ್ನು ಎದುರಿಸುವರು. ಡಬಲ್ಸ್ ವಿಭಾಗದಲ್ಲಿ ಯೂಜಿ ಅವರು ದಿವಿಜ್ ಶರಣ್ ಜೊತೆ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry