ಟೆನಿಸ್: ಸಾನಿಯಾಗೆ ನಿರಾಸೆ

7

ಟೆನಿಸ್: ಸಾನಿಯಾಗೆ ನಿರಾಸೆ

Published:
Updated:

ದುಬೈ (ಪಿಟಿಐ): ಸಾನಿಯಾ ಮಿರ್ಜಾ ದುಬೈ ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಹಂತ ಪ್ರವೇಶಿಸಲು ವಿಫಲರಾದರು. ಅವರು ಅರ್ಹತಾ ಹಂತದ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.

ಸೋಮವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿ 6-2, 3-6, 2-6 ರಲ್ಲಿ ಕೆನಡಾದ ಅಲೆಕ್ಸಾಂಡ್ರಾ ವೊಜ್‌ನಿಯಾಕ್ ಕೈಯಲ್ಲಿ ಪರಾಭವಗೊಂಡರು. ಇದೀಗ ಸಾನಿಯಾ ಡಬಲ್ಸ್ ವಿಭಾಗದಲ್ಲಿ ಮಾತ್ರ ಪ್ರಶಸ್ತಿ ಗೆಲ್ಲುವ ಪ್ರಯತ್ನ ನಡೆಸಬೇಕಿದೆ. ರಷ್ಯಾದ ಎಲೆನಾ ವೆಸ್ನಿನಾ ಮತ್ತು ಸಾನಿಯಾ ಜೋಡಿಗೆ ಇಲ್ಲಿ ಎರಡನೇ ಶ್ರೇಯಾಂಕ ಲಭಿಸಿದೆ. ಮೊದಲ ಸುತ್ತಿನಲ್ಲಿ ಭಾರತ- ರಷ್ಯಾ ಜೋಡಿ ಒಮನ್‌ನ ಫಾತಿಮಾ ಅಲ್ ನಬಾನಿ ಮತ್ತು ಸ್ಲೊವೇಕಿಯದ ಆಂಡ್ರೆಜಾ ಕ್ಲೆಪಾಕ್ ವಿರುದ್ಧ ಪೈಪೋಟಿ ನಡೆಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry