ಟೆನಿಸ್: ಸಾನಿಯಾಗೆ ಸುಲಭದ ಎದುರಾಳಿ

ಮಂಗಳವಾರ, ಜೂಲೈ 16, 2019
25 °C

ಟೆನಿಸ್: ಸಾನಿಯಾಗೆ ಸುಲಭದ ಎದುರಾಳಿ

Published:
Updated:

ಲಂಡನ್ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಹಾಗೂ ಸೋಮದೇವ್ ದೇವ್‌ವರ್ಮನ್ ಅವರಿಗೆ ಸೋಮವಾರ ಇಲ್ಲಿ ಶುರುವಾಗಲಿರುವ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಎದುರಾಳಿಗಳು ಲಭಿಸಿದ್ದಾರೆ.ಸೋಮ್ ಮೊದಲ ಸುತ್ತಿನ ಪಂದ್ಯನಲ್ಲಿ ಜರ್ಮನಿಯ ಡೇನಿಸ್ ಗ್ರೆಮೆಲ್‌ಮಯಿರ್ ಅವರನ್ನು ಎದುರಿಸಲಿದ್ದಾರೆ. ಡೇನಿಸ್ 110ನೇ ಸ್ಥಾನದಲ್ಲಿದ್ದಾರೆ. ಸಾನಿಯಾ ಫ್ರಾನ್ಸ್‌ನ ವರ್ಜಿನಿ ರಜಾನೊ ಅವರ ಸವಾಲನ್ನು ಎದುರಿಸಲಿದ್ದಾರೆ. ವರ್ಜಿನಿ 98ನೇ ಸ್ಥಾನದಲ್ಲಿದ್ದಾರೆ.

 

ಡಬಲ್ಸ್‌ನಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಶ್ರೇಯಾಂಕ ರಹಿತ ಆಟಗಾರರಾದ ಕ್ರೊಯೇಷ್ಯಾದ ಇವಾವ್ ಡೊಡಿಗ್ ಹಾಗೂ ಲೊವ್ರೊ ಜೊವ್ಕೊ ಎದುರು ಸೆಣಸಲಿದ್ದಾರೆ. ನಾಲ್ಕನೇ ಶ್ರೇಯಾಂಕ ಹೊಂದಿರುವ ಭಾರತ-ಪಾಕ್ ಜೋಡಿ ರೋಹನ್ ಬೋಪಣ್ಣ ಹಾಗೂ ಅಸಿಯಾಮ್ ಉಲ್ ಹಕ್ ಖುರೇಶಿ ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಕೆಬಲ್ ಹಾಗೂ ರಾಬರ್ಟ್ ಫರಾಹ ಅವರ ಸವಾಲಿಗೆ ಎದೆ ಕೊಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry