ಟೆನಿಸ್: ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಜಾಗೆ ನಿರಾಸೆ

7

ಟೆನಿಸ್: ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಜಾಗೆ ನಿರಾಸೆ

Published:
Updated:
ಟೆನಿಸ್: ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಜಾಗೆ ನಿರಾಸೆ

ಚಾರ್ಲ್‌ಸ್ಟನ್, ಅಮೆರಿಕ (ಪಿಟಿಐ): ಸಾನಿಯಾ ಮಿರ್ಜಾ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್ ಕಪ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ  ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಶನಿವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಭಾರತದ ಆಟಗಾರ್ತಿ 6-2, 2-6, 2-6ರಲ್ಲಿ  ಚೀನಾದ 11ನೇ ಶ್ರೇಯಾಂಕದ ಪೆಂಗ್ ಶುಯ್  ಎದುರು ಸೋಲು ಕಂಡರು.ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಆಟಗಾರ್ತಿ ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಸೋಲು ಕಂಡರು. ಮೊದಲ ಸೆಟ್‌ನಲ್ಲಿ ವಿಶ್ವಾಸಪೂರ್ಣ ಪ್ರದರ್ಶನ ತೋರಿದ ಸಾನಿಯಾ ಮುಂದಿನ ಎರಡೂ ಸೆಟ್‌ಗಳಲ್ಲಿ ಪೆಂಗ್ ಅವರ ಕರಾರುವಕ್ಕಾದ ಸರ್ವ್ ಹಾಗೂ ಸಮಯೋಚಿತ ಆಟಕ್ಕೆ ಮಣಿದರು. ಈ ಹೋರಾಟ ಒಟ್ಟು ಒಂದು ಗಂಟೆ 33 ನಿಮಿಷಗಳ ಕಾಲ ನಡೆಯಿತು.ಡಬಲ್ಸ್‌ನಲ್ಲಿ ನಾಲ್ಕರ ಘಟ್ಟಕ್ಕೆ: ಸಿಂಗಲ್ಸ್‌ನಲ್ಲಿ ಸೋಲು ಅನುಭವಿಸಿದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಇದೇ ಟೂರ್ನಿಯ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಾನಿಯಾ-ವೆಸ್ನಿನಾ ಜೋಡಿ 3-6, 6-2, 10-8ರಲ್ಲಿ ರಷ್ಯಾದ ಅಲಾ ಕುದ್ರಸ್ತೇವಾ ಹಾಗೂ ಆಸ್ಟ್ರೇಲಿಯದ ಅನಸ್ತಾಸಿಯಾ ರೋಡೆನೋವಾ ಅವರನ್ನು ಮಣಿಸಿತು.ಮೊದಲ ಸೆಟ್‌ನಲ್ಲಿ ಸೋಲು ಕಂಡ ಸಾನಿಯಾ-ವೆಸ್ನಿನಾ ಜೋಡಿ ಮುಂದಿನ ಎರಡು ಸೆಟ್‌ಗಳಲ್ಲಿ ಉತ್ತಮ ಲಯ ಕಂಡುಕೊಂಡು ಎದುರಾಳಿ ಜೋಡಿಗೆ ತಿರುಗೇಟು ನೀಡಿತು. ಸಾನಿಯಾ-ವೆಸ್ನಿನಾ ಅವರು ಸೆಮಿಫೈನಲ್ ಪಂದ್ಯದಲ್ಲಿ  ಜಿ ಜೆಹಂಗ್ ಮತ್ತು ಶೂಯಾ ಜೋಡಿಯ ಸವಾಲನ್ನು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry