ಟೆನಿಸ್: ಸೆಮಿಫೈನಲ್‌ಗೆ ನಿಕ್ಷೇಪ್

7

ಟೆನಿಸ್: ಸೆಮಿಫೈನಲ್‌ಗೆ ನಿಕ್ಷೇಪ್

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ಮುಂದುವರಿಸಿದ ಕರ್ನಾಟಕದ ಬಿ. ಆರ್. ನಿಕ್ಷೇಪ್ ನವದೆಹಲಿಯಲ್ಲಿ ನಡೆಯುತ್ತಿರುವ ಫೆನೆಸ್ಟಾ ರಾಷ್ಟ್ರೀಯ ಟೆನಿಸ್ ಟೂರ್ನಿಯ 14 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಕ್ಷೇಪ್ 6-3, 6-3 ರಲ್ಲಿ ದೆಹಲಿಯ ಅಲೆಕ್ಸ್ ಸೋಲಂಕಿ ವಿರುದ್ಧ ಜಯ ಸಾಧಿಸಿದರು. ಬಾಲಕರ 14 ವರ್ಷ ವಯಸ್ಸಿನೊಳಗಿನವರ ಡಬಲ್ಸ್ ವಿಭಾಗದಲ್ಲೂ ನಿಕ್ಷೇಪ್ ಫೈನಲ್ ಪ್ರವೇಶಿಸಿದ್ದಾರೆ.

ಅಗ್ರಶ್ರೇಯಾಂಕದ ಆಟಗಾರ ದೆಹಲಿಯ ಸಚಿನ್ ಕುಮಾರ್, ವಿಶು ಪ್ರಸಾದ್ ಮತ್ತು ಧ್ರುವ್ ಪಾಲ್ ಅವರೂ ಇದೇ ವಯೋವರ್ಗದಲ್ಲಿ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry