ಟೆನಿಸ್: ಸೆಮಿಫೈನಲ್‌ಗೆ ನಿಕ್ಷೇಪ್

7

ಟೆನಿಸ್: ಸೆಮಿಫೈನಲ್‌ಗೆ ನಿಕ್ಷೇಪ್

Published:
Updated:

ಬೆಂಗಳೂರು: ಬಿ.ಆರ್. ನಿಕ್ಷೇಪ್ ಮತ್ತು ಪಿ.ವಿ. ಜ್ಞಾನ ಭಾಸ್ಕರ್ ಇಲ್ಲಿ ನಡೆಯುತ್ತಿರುವ ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಬಾಲಕರ 18 ಮತ್ತು 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಬುಧವಾರ ನಡೆದ 18 ವರ್ಷದೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಕ್ಷೇಪ್ 6-3, 6-1 ರಲ್ಲಿ ರಿಷಬ್ ದಹಿಯಾ ವಿರುದ್ಧ ಗೆದ್ದರು. 16 ವರ್ಷದೊಳಗಿನವರ ವಿಭಾಗದ ಪಂದ್ಯದಲ್ಲಿ 6-2, 6-0 ರಲ್ಲಿ ಕೆ.ಎಸ್. ಚಿರಂತನ್ ಅವರನ್ನು ಮಣಿಸಿದರು.

ಭಾಸ್ಕರ್ ಕ್ರಮವಾಗಿ 6-1, 6-0 ರಲ್ಲಿ ವರುಣ್ ವೆಂಕಟ್ ಮೇಲೂ, 6-4, 7-6 ರಲ್ಲಿ ಕೆ. ಮೋಹಿತ್ ರೆಡ್ಡಿ ಎದುರೂ ಜಯ ಸಾಧಿಸಿದ ನಾಲ್ಕರಘಟ್ಟ ಪ್ರವೇಶಿಸಿದರು.

ರಶ್ಮಿಕಾ ರಾಜನ್ ಬಾಲಕಿಯರ 18 ಮತ್ತು 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದರು. ಅವರು 6-4, 6-4 ರಲ್ಲಿ ಕೃತಿಕಾ ಎಸ್ ರಾಜ್ ವಿರುದ್ಧವೂ, 7-6, 6-0 ರಲ್ಲಿ ಬಿ.ಎಸ್. ಸುಮಾ ಪ್ರಿಯಾಂಕಾ ಎದುರೂ ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry