ಟೆನಿಸ್: ಸೆಮಿಫೈನಲ್‌ಗೆ ಬೋಪಣ್ಣ-ಖುರೇಶಿ

ಭಾನುವಾರ, ಜೂಲೈ 21, 2019
27 °C

ಟೆನಿಸ್: ಸೆಮಿಫೈನಲ್‌ಗೆ ಬೋಪಣ್ಣ-ಖುರೇಶಿ

Published:
Updated:

ನವದೆಹಲಿ (ಪಿಟಿಐ): ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಶಿ ಅವರು ಜರ್ಮನಿಯ ಹಾಲೆಯಲ್ಲಿ ನಡೆಯುತ್ತಿರುವ ಜೆರ‌್ರಿ ವೆಬರ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಖುರೇಶಿ 4-6, 7-6, 10-4ರಲ್ಲಿ ಜರ್ಮನಿಯ ಡಸ್ಟಿನ್ ಬ್ರೌನ್ ಹಾಗೂ ಫ್ರಾನ್ಸ್‌ನ ಗೇಲ್ ಮೊನ್‌ಫಿಲ್ಸ್ ಅವರನ್ನು ಪರಾಭವಗೊಳಿಸಿದರು.`ಇಂಡೋ-ಪಾಕ್ ಎಕ್ಸ್‌ಪ್ರೆಸ್~ ಖ್ಯಾತಿಯ ಜೋಡಿ ಮೊದಲ ಸೆಟ್‌ನಲ್ಲಿ ಸೋಲು ಕಂಡಿತು. ಶ್ರೇಯಾಂಕ ರಹಿತ ಜೋಡಿಯಾದ ಬ್ರೌನ್ ಹಾಗೂ ಮೊನ್‌ಫಿಲ್ಸ್ ಅಚ್ಚರಿ ಪ್ರದರ್ಶನ ತೋರಿತು. ಆದರೆ ಬೋಪಣ್ಣ-ಖುರೇಶಿ ಸಾಕಷ್ಟು ಹೋರಾಟಕ್ಕೆ ಕಾರಣವಾದ ಎರಡನೇ ಸೆಟ್‌ನಲ್ಲಿ ಗೆದ್ದು ಪಂದ್ಯವನ್ನು ಸಮಬಲ ಮಾಡಿಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಅಷ್ಟೊಂದು ಸಮಸ್ಯೆ ಎದುರಾಗಲಿಲ್ಲ.ಸೂಪರ್ ಟೈಬ್ರೇಕರ್‌ನಲ್ಲಿ ಬೋಪಣ್ಣ ಹಾಗೂ ಖುರೇಷಿ 10-4ರಲ್ಲಿ ಗೆದ್ದು ನಾಲ್ಕರ ಘಟ್ಟದಲ್ಲಿ ಆಡಲು ಅವಕಾಶ ಪಡೆದುಕೊಂಡರು.ಭಾರತ-ಪಾಕ್ ಜೋಡಿ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ. ಸೆಮಿಫೈನಲ್‌ನಲ್ಲಿ ಬೋಪಣ್ಣ ಹಾಗೂ ಖುರೇಶಿ ಜರ್ಮನಿಯ ಕ್ರಿಸ್ಟೋಫರ್ ಕಾಸ್-ಫಿಲಿಪ್ ಕೊಹ್ಲಶ್ರೆಬರ್ ಹಾಗೂ ಫಿನ್ಲೆಂಡ್‌ನ ಜರ್ಕೊ ನಿಮಿನೆನ್-ಸರ್ಬಿಯಾದ ವಿಕ್ಟರ್ ಟ್ರಾಯಿಕಿ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry