ಟೆನಿಸ್: ಸೆಮಿಫೈನಲ್‌ಗೆ ವಶಿಷ್ಠ

7

ಟೆನಿಸ್: ಸೆಮಿಫೈನಲ್‌ಗೆ ವಶಿಷ್ಠ

Published:
Updated:

ಬೆಂಗಳೂರು: ಎರಡೂ ಸೆಟ್‌ಗಳಲ್ಲಿ ಅಲ್ಪ ಪ್ರತಿರೋಧ ಎದುರಿಸಿ ಗೆಲುವು ಸಾಧಿಸಿದ ವಶಿಷ್ಠ ವಿ. ಚೆರುಕು, ಎಐಟಿಎ ಟ್ಯಾಲೆಂಟ್ ಸೀರಿಸ್ ರಾಷ್ಟ್ರೀಯ ರ‌್ಯಾಂಕಿಂಗ್ ಟೆನಿಸ್ ಟೂರ್ನಿಯ ಬಾಲಕರ 18 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಮಹಿಳಾ ಸೇವಾ ಸಮಾಜ ಟೆನಿಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಬುಧವಾರ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ ವಶಿಷ್ಠ 6-3, 6-4ರಲ್ಲಿ ಮೂರನೇ ಶ್ರೇಯಾಂಕದ ಅಲೋಕ್ ಆರಾಧ್ಯ ಅವರನ್ನು ಸೋಲಿಸಿದರು.ಇದೇ ಆಟಗಾರ 16 ವರ್ಷದೊಳಗಿನ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ವಶಿಷ್ಠ 6-3, 6-4ರಲ್ಲಿ ಮಯೂಖ್ ರಾವತ್ ಎದುರು ಜಯ ಪಡೆದರು. ಪ್ರಶಸ್ತಿ ಘಟ್ಟದ ಪಂದ್ಯದಲ್ಲಿ ವಶಿಷ್ಠ ಅವರು ವಿಘ್ನೇಶ್ ಸುಬ್ರಮಣಿಯಮ್ ಸವಾಲನ್ನು ಎದುರಿಸಲಿದ್ದಾರೆ. ಈ ಆಟಗಾರ  ಗೋಕುಲ್ ವಿರುದ್ಧ `ವಾಕ್ ಓವರ್' ಪಡೆದು ಫೈನಲ್ ಪ್ರವೇಶಿಸಿದ್ದಾರೆ.ಫೈನಲ್‌ಗೆ ಸೋಹಾ-ರಷ್ಮಿಕಾ: ಸೋಹಾ ಮತ್ತು ರಷ್ಮಿಕಾ ರಂಜನ್ ಬಾಲಕಿಯರ 16 ವರ್ಷದೊಳಗಿನವರ ವಿಭಾಗದ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ನಾಲ್ಕರ ಘಟ್ಟದ ಪಂದ್ಯದಲ್ಲಿ ಸೋಹಾ 7-6, 6-4ರಲ್ಲಿ ಮಧುಮಿತಾ ಮೀನಾಕ್ಷಿ ಮೇಲೂ, ರಷ್ಮಿಕಾ 6-2, 3-6, 6-2ರಲ್ಲಿ ಸಿ.ಎಸ್. ಪ್ರಣಿತಾ ಅವರನ್ನು ಮಣಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry