ಟೆನಿಸ್: ಸೆಮಿಫೈನಲ್‌ಗೆ ವಸಿಷ್ಠ, ನಿಶಾ

7

ಟೆನಿಸ್: ಸೆಮಿಫೈನಲ್‌ಗೆ ವಸಿಷ್ಠ, ನಿಶಾ

Published:
Updated:
ಟೆನಿಸ್: ಸೆಮಿಫೈನಲ್‌ಗೆ ವಸಿಷ್ಠ, ನಿಶಾ

ಮೈಸೂರು: ಕರ್ನಾಟಕದ ಅಗ್ರಶ್ರೇಯಾಂಕದ ಅಟಗಾರ ವಸಿಷ್ಠ ವಿನೋದ್ ಚೆರುಕು ಮತ್ತು ನಿಶಾ ಶೆಣೈ ಅವರು ಮೈಸೂರು ಟೆನಿಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 14 ವರ್ಷದ ಬಾಲಕ ಮತ್ತು ಬಾಲಕಿಯರ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.ಎಂಟಿಸಿ ಸಿಂಥೆಟಿಕ್ ಕೋರ್ಟ್‌ನಲ್ಲಿ ಬುಧವಾರ ನಡೆದ 14 ವರ್ಷದ ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಮೈಸೂರಿನ ವಸಿಷ್ಠ 6-2, 6-2ರಿಂದ ಕರ್ನಾಟಕದ ಎಂ. ಅರ್ಜುನ್ ಅವರ ವಿರುದ್ಧ ಜಯಿಸಿದರು.ಇನ್ನೊಂದು ಪಂದ್ಯದಲ್ಲಿ ಕರ್ನಾಟಕದ ಎಲ್. ಭರತ್ 6-1, 6-1ರಿಂದ ಕರ್ನಾಟಕದವರೇ ಆದ ಕೆ. ಹೇಮಂತ್ ವಿರುದ್ಧ, ಕರ್ನಾಟಕದ ಎಂ.ಪಿ. ಪ್ರಜ್ವಲ್ 7-6(4), 6-2ರಿಂದ ತಮಿಳುನಾಡಿನ ರೆಹಾನ್‌ಕುಮಾರ್ ವಿರುದ್ಧ ಗೆದ್ದರು.

14 ವರ್ಷದ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ನಿಶಾ ಶೆಣೈ 6-1, 6-4ರಿಂದ ಮುಸ್ಕಾನ್ ರಂಜನ್ ವಿರುದ್ಧ ಜಯಿಸಿದರು. ಇದೇ ವಿಭಾಗದ ಇನ್ನುಳಿದ ಕ್ವಾರ್ಟರ್‌ಫೈನಲ್‌ಗಳಲ್ಲಿ ಕರ್ನಾಟಕದ ಅದಿತಿ ದಿಲೀಪ್ 6-4, 6-1ರಿಂದ ಕರ್ನಾಟಕದ ಪ್ರಾರ್ಥನಾ ಪ್ರಭಾಕರ್ ವಿರುದ್ಧ, ಕರ್ನಾಟಕದ ಆಶಿಕಾ ಡಿ. ಅರಸ್ 7-5, 6-2ರಿಂದ ತಮಿಳುನಾಡಿನ ಆರ್.ವಿ. ಹಾನಿಶ್ಯಾ ರಾಜ್ ವಿರುದ್ಧ ಗೆದ್ದರು. ಮಹಾರಾಷ್ಟ್ರದ ಸಂಸ್ಮೃತಿ ರಂಜನ್ 4-6, 7-5, 6-3ರಿಂದ ಕರ್ನಾಟಕದ ನಿಖಿತಾ ಪಿಂಟೋ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು.ನಾಲ್ಕರ ಘಟ್ಟಕ್ಕೆ ಪ್ರಜ್ವಲ್, ವಾರುಣ್ಯ: ಅಗ್ರಶ್ರೇಯಾಂಕದ ಆಟಗಾರ ಕರ್ನಾಟಕದ ಎಸ್.ಡಿ. ಪ್ರಜ್ವಲ್‌ದೇವ್ ಮತ್ತು ವಾರುಣ್ಯ ಚಂದ್ರಶೇಖರ್ ಕ್ರಮವಾಗಿ 16 ವರ್ಷದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ  ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಜ್ವಲ್‌ದೇವ್ 6-2, 6-1ರಿಂದ ಎಂ.ಎಸ್.ರಕ್ಷಿತ್ ವಿರುದ್ಧ ಗೆದ್ದರು. ಇದೇ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಕರ್ನಾಟಕದ ಎಸ್. ಕಿಶನ್ 6-4, 6-3ರಿಂದ ಕರ್ನಾಟಕದ ಟಿ. ವಿಭುವರ್ಷ ವಿರುದ್ಧ, ಕರ್ನಾಟಕದ ಅಲೋಕ್ ಆರಾಧ್ಯ 7-6(2), 6-2ರಿಂದ ಕೆ.ಎಸ್. ಚಿರಂತನ್ ವಿರುದ್ಧ, ವಸಿಷ್ಠ ವಿನೋದ ಚೆರುಕು 6-0, 6-4ರಿಂದ ಕರ್ನಾಟಕದ ಹರ್ಷ ಡಿ. ಲಕಾನಿ ವಿರುದ್ಧ ಗೆದ್ದರು.ಬಾಲಕಿಯರ ವಿಭಾಗದಲ್ಲಿ  ವಾರುಣ್ಯ 6-0, 6-0ಯಿಂದ ಓಡಿಶಾದ ಶಿಲ್ಪಿ ಸ್ವರೂಪದಾಸ್ ವಿರುದ್ಧ ಗೆದ್ದರು. ಕರ್ನಾಟಕದ ನಿಖಿತಾ ಪಿಂಟೋ 7-6 (4), 6-4ರಿಂದ ಮಹಾರಾಷ್ಟ್ರದ ಸಂಸ್ಮೃತಿ ರಂಜನ್ ವಿರುದ್ಧ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry