ಶನಿವಾರ, ಏಪ್ರಿಲ್ 17, 2021
23 °C

ಟೆನಿಸ್: ಸೆಮಿಫೈನಲ್‌ಗೆ ಸೂರಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಕರ್ನಾಟಕದ ಸೂರಜ್ ಆರ್ ಪ್ರಬೋಧ್ ಇಲ್ಲಿ ನಡೆಯುತ್ತಿರುವ 18 ವರ್ಷ ವಯಸ್ಸಿನೊಳಗಿನ ಬಾಲಕರ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೂರಜ್ 3-6, 6-2, 6-3ರಿಂದ ತಮಿಳುನಾಡಿನ ಋತ್ವಿಕ್ ಆನಂದ್ ವಿರುದ್ಧ ಗೆದ್ದರು.ಇವರು ನಾಲ್ಕರ ಘಟ್ಟದಲ್ಲಿ ಆಂಧ್ರಪ್ರದೇಶದ ಆಟಗಾರ ಶ್ರೇಯಕರಹಿತ ಎ.ಕೆ.ಪ್ರಧಾ ಶರಧಿ ವಿರುದ್ಧ ಆಡಲಿದ್ದಾರೆ. ಪ್ರಧಾಶರಧಿ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ ದೆಹಲಿಯ ಕರಣ್ ಸಾಲ್ವಾನ್ ಅವರನ್ನು 6-2, 6-0 ಯಿಂದ ಸೋಲಿಸಿ ಅನಿರೀಕ್ಷಿತ ಫಲಿತಾಂಶ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.