ಟೆನಿಸ್: ಸೆಮಿಫೈನಲ್‌ಗೆ ಸೋಮ್

7

ಟೆನಿಸ್: ಸೆಮಿಫೈನಲ್‌ಗೆ ಸೋಮ್

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ):  ಭಾರತದ ಸೋಮ್‌ದೇವ್ ದೇವವರ್ಮನ್ ಅವರು ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ಎಟಿಪಿ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಮ್ 3-6, 7-6, 6-1ರಲ್ಲಿ ಆತಿಥೇಯ ದಕ್ಷಿಣ ಆಫ್ರಿಕದ ರಿಕ್ ದೇ ವೊಯಿಸ್ಟ್ ಅವರನ್ನು ಮಣಿಸಿದರು.ಎರಡು ಗಂಟೆ 18 ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯ ಮೊದಲ ಸೆಟ್‌ನಲ್ಲಿ ಸೋಮ್ ಸೋಲು ಅನುಭವಿಸಿದರು. ಒಂದು ಹಂತದಲ್ಲಿ 3-1ರಲ್ಲಿ ಮುನ್ನಡೆ ಸಾಧಿಸಿದ್ದಭಾರತದ ಆಟಗಾರ ಕೊನೆ ಯಲ್ಲಿ ಕೆಲ ತಪ್ಪುಗಳನ್ನು ಮಾಡಿದರು. ಇದೇ ಅವಕಾಶವನ್ನು ಬಳಸಿಕೊಂಡ ವೊಯಿಸ್ಟ್ ಕರಾರುವಕ್ಕಾದ ಸರ್ವ್ ಗಳ ಮೂಲಕ ಸುಲಭ ಮುನ್ನಡೆ ಸಾಧಿಸಿದರು.ಆದರೆ ಮತ್ತೆ ಲಯ ಕಂಡುಕೊಂಡ ಸೋಮ್ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ವೊಯಿಸ್ಟ್ ಅವರನ್ನು ಸುಲಭವಾಗಿ ಕಟ್ಟಿ ಹಾಕಿದ ಸೋಮ್ ಸೆಮಿ ಫೈನಲ್‌ಗೆ ರಹದಾರಿ ಪಡೆದರು.  ಇದೇ ಟೂರ್ನಿಯ ಕಳೆದ ವರ್ಷದ ಎಂಟರಘಟ್ಟದ ಪಂದ್ಯದಲ್ಲಿ ಸೋಮ್ ಸೋಲು ಆನುಭವಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry