ಸೋಮವಾರ, ನವೆಂಬರ್ 18, 2019
28 °C

ಟೆನಿಸ್: ಸೆಮಿಫೈನಲ್‌ನಲ್ಲಿ ದಿವಿಜ್-ಪುರವ್‌ಗೆ ಸೋಲು

Published:
Updated:

ನವದೆಹಲಿ (ಪಿಟಿಐ): ಭಾರತದ ದಿವಿಜ್ ಶರಣ್ ಮತ್ತು ಪುರವ್ ರಾಜಾ, ಮೆಕ್ಸಿಕೋದ `ಗ್ವಾಡಲಜರಾ ಎಟಿಪಿ ಚಾಲೆಂಜರ್ ಸ್ಪರ್ಧೆ'ಯ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡರು.  ಶನಿವಾರ ನಡೆದ ಪಂದ್ಯದಲ್ಲಿ ಅವರು 6-7 (2), 4-6ರಿಂದ ಕ್ರೊವೇಷಿಯಾದ ಮರೀನ್ ದ್ರಗಂಜ ಮತ್ತು ಮೇಟ್ ಪೇವಿಕ್ ವಿರುದ್ಧ ಪರಾಭವಗೊಂಡರು.ಗ್ವಾಡಲಜರಾ ಎಟಿಪಿ ಚಾಲೆಂಜರ್ ಸ್ಪರ್ಧೆಯು ಒಟ್ಟು 54 ಲಕ್ಷ ರೂಪಾಯಿ ಬಹುಮಾನ ಮೊತ್ತ ಹೊಂದಿದ್ದು, ದಿವಿಜ್ ಮತ್ತು ಪುರವ್ ತಲಾ 1,16,640 ರೂಪಾಯಿ ಪಡೆದರು.ಸೆಮಿಫೈನಲ್ ಪ್ರವೇಶಿಸಿದ ಕಾರಣ ಇಬ್ಬರಿಗೂ ತಲಾ 35 ರ‌್ಯಾಂಕಿಂಗ್ ಪಾಯಿಂಟ್‌ಗಳು ದೊರೆತಿವೆ. ಪ್ರಸ್ತುತ 102ನೇ ಸ್ಥಾನದಲ್ಲಿರುವ ದಿವಿಜ್, ಅಗ್ರ 100 ಆಟಗಾರರ ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಲು ಇದರಿಂದ ಸಾಧ್ಯವಾಯಿತು.

ಪ್ರತಿಕ್ರಿಯಿಸಿ (+)