ಟೆನಿಸ್: ಸೋಮದೇವ್‌ಗೆ ನಿರಾಸೆ

7

ಟೆನಿಸ್: ಸೋಮದೇವ್‌ಗೆ ನಿರಾಸೆ

Published:
Updated:

ಸಿಡ್ನಿ (ಪಿಟಿಐ): ಭಾರತದ ಸೋಮದೇವ್‌ ದೇವವರ್ಮನ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎಟಿಪಿ ಅಪಿಯಾ ಅಂತರರಾಷ್ಟ್ರೀಯ ಅರ್ಹತಾ ಟೂರ್ನಿಯ ಸಿಂಗಲ್ಸ್‌ನಲ್ಲಿ ಪರಾಭವಗೊಂಡಿದ್ದಾರೆ.ಭಾನುವಾರ ನಡೆದ ಅರ್ಹತಾ ಹಂತದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಮದೇವ್ 6–2, 2–6, 3–6 ರಲ್ಲಿ ಜಾನ್‌ ಲೆನ್ನಾರ್ಡ್‌ ಸ್ಟಫ್‌ ಎದುರು  ಸೋಲು ಕಂಡು ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 90 ನೇ ಸ್ಥಾನ ಹೊಂದಿರುವ ಸೋಮದೇವ್ ಮಿಂಚಿನ ಆಟ ಪ್ರದರ್ಶಿಸುವ ಮೂಲಕ ಮೊದಲ ಸೆಟ್‌ಅನ್ನು ನಿರಾಯಾಸವಾಗಿ ಗೆದ್ದುಕೊಂಡರು.ಆದರೆ ನಂತರದ ಸೆಟ್‌ಗಳಲ್ಲಿ ಎದುರಾಳಿ ಆಟಗಾರ ಒಡ್ಡಿದ ಸವಾಲಿಗೆ ಪ್ರತಿರೋಧ ತೋರುವಲ್ಲಿ ವಿಫಲರಾದ ಅವರು ಸುಲಭವಾಗಿ ಶರಣಾಗುವ ಮೂಲಕ ನಿರಾಸೆ ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry