ಟೆನಿಸ್: ಸೋಮದೇವ್‌ಗೆ ಸೋಲು

7

ಟೆನಿಸ್: ಸೋಮದೇವ್‌ಗೆ ಸೋಲು

Published:
Updated:

ಇಸ್ತಾನ್‌ಬುಲ್‌ (ಪಿಟಿಐ): ಭಾರತದ ಸೋಮದೇವ್ ದೇವವರ್ಮನ್‌ ಇಲ್ಲಿ ಆರಂಭವಾದ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.ಎರಡನೇ ಶ್ರೇಯಾಂಕ ಹೊಂದಿದ್ದ ಸೋಮದೇವ್‌ 2–6, 3–6ರಲ್ಲಿ ರಷ್ಯಾದ ಕೊನ್ಸಂಟಿನ್‌ ಕ್ರಾವ್ಚುಕ್‌ ಎದುರು ಪರಾಭವಗೊಂಡರು.ಅಮೆರಿಕ ಓಪನ್‌ ಗ್ರ್ಯಾಂಡ್ ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತದ ಆಟಗಾರ ಇಲ್ಲಿ ಸ್ವಲ್ಪವೂ ಪ್ರತಿರೋಧ ತೋರಲಿಲ್ಲ.ಲಕ್ಸೆಂಬರ್ಗ್‌ನಲ್ಲಿ ನಡೆಯು­ತ್ತಿರುವ ಪೆಂಟಗಾ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕದ ದಿವಿಜ್‌ ಶರಣ್‌–ಪುರವ್‌ ರಾಜಾ ಆರಂಭದಲ್ಲಿಯೇ ಮುಗ್ಗರಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಈ ಜೋಡಿ 3–6, 3–6ರಲ್ಲಿ ಆಸ್ಟ್ರಿಯಾದ ಮ್ಯಾಕ್ಸಿಮಿಲನ್‌ ನ್ಯೂಕ್ರಿಸ್ಟ್‌–ಜೂರ್ಗನ್‌ ಜೊಪ್‌ ಎದುರು ಸೋಲು ಅನುಭವಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry