ಗುರುವಾರ , ಜೂನ್ 24, 2021
23 °C

ಟೆನಿಸ್: ಹುಬೆರ್-ರೇಮಂಡ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಇಂಡಿಯನ್ ವೆಲ್ಸ್, ಕ್ಯಾಲಿಫೋರ್ನಿಯಾ (ಐಎಎನ್‌ಎಸ್):  ಭಾರತದ ಸಾನಿಯಾ  ಮಿರ್ಜಾ ಹಾಗೂ ಅವರ ಜೊತೆಗಾರ್ತಿ ರಷ್ಯಾದ ಎಲೆನಾ ವೆಸ್ನಿನಾ ಇಲ್ಲಿ ನಡೆದ ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಫೈನಲ್‌ನಲ್ಲಿ ಪರಾಭವಗೊಂಡರು.ಅಂತಿಮ ಸುತ್ತಿನ ಹಣಾಹಣಿಯಲ್ಲಿ ಸಾನಿಯಾ-ವೆಸ್ನಿನಾ ಜೋಡಿ 2-6, 3-6ರಲ್ಲಿ ಅಮೆರಿಕದ ಲಿಜೆಲ್ ಹುಬೆರ್ ಹಾಗೂ ಲೀಸಾ ರೇಮಂಡ್ ಎದುರು ಸೋಲು ಕಂಡಿತು. ಹಾಗಾಗಿ ಸಾನಿಯಾ ಹಾಗೂ ವೆಸ್ನಿನಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.ಈ ವರ್ಷ ಅತ್ಯುತ್ತಮ           ಫಾರ್ಮ್‌ನಲ್ಲಿರುವ ಅಗ್ರ ಶ್ರೇಯಾಂಕದ ಆಟಗಾರ್ತಿಯರಾದ ಹುಬೆರ್ ಹಾಗೂ ರೇಮಂಡ್ ಈ ಪಂದ್ಯ ಗೆಲ್ಲಲು ಹೆಚ್ಚು ಸಮಯ ಬೇಕಾಗಲಿಲ್ಲ. ಎರಡೂ ಸೆಟ್‌ಗಳಲ್ಲಿ ಈ ಜೋಡಿ ಪಾರಮ್ಯ ಮೆರೆಯಿತು. ಈ ಪಂದ್ಯ ಕೇವಲ 65 ನಿಮಿಷಗಳಲ್ಲಿ ಮುಗಿದು ಹೋಯಿತು. ಇವರು ಕಳೆದ ಎರಡು ತಿಂಗಳಿನಲ್ಲಿ ಪ್ಯಾರಿಸ್, ದೋಹಾ ಹಾಗೂ ದುಬೈನಲ್ಲಿ ನಡೆದ ಡಬ್ಲ್ಯುಟಿಎ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದರು. ಹಾಗಾಗಿ ಈ ವರ್ಷ ಇವರಿಗೆ ಲಭಿಸುತ್ತಿರುವ ನಾಲ್ಕನೇ ಪ್ರಶಸ್ತಿ ಇದಾಗಿದೆ.`ನಾವೀಗ ಉತ್ತಮ ಪ್ರದರ್ಶನ ತೋರುತ್ತಿದ್ದೇವೆ. ಆದರೆ ಕಣಕ್ಕಿಳಿದಾಗ ಈ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಎದುರಾಳಿ ಆಟಗಾರ್ತಿಯರಿಗೆ ನಮ್ಮನ್ನು ಸೋಲಿಸುವ ತಾಕತ್ತಿದೆ. ಅದಕ್ಕಾಗಿ ನಾವು ಆ ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸಬೇಕು~ ಎಂದು ರೇಮಂಡ್ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.