ಗುರುವಾರ , ಜೂನ್ 17, 2021
22 °C

ಟೆನ್‌ಪಿನ್: ಗಿರೀಶ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಗಿರೀಶ್ ಗಾಬಾ ಇಲ್ಲಿ ನಡೆದ ಕೆಎಸ್‌ಟಿಬಿಎ- ಸ್ಟಾರ್ ಸಿಟಿ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಸ್ಟಾರ್ ಸಿಟಿ ಬೌಲಿಂಗ್ ಸೆಂಟರ್‌ನಲ್ಲಿ ಸೋಮವಾರ ನಡೆದ ಅಂತಿಮ ಪಂದ್ಯದಲ್ಲಿ ಗಿರೀಶ್ 382-352 ರಲ್ಲಿ ತಮಿಳುನಾಡಿನ ದಿನೇಶ್ ಕುಮಾರ್ ಅವರನ್ನು ಮಣಿಸಿದರು. ಮೊದಲ `ಪ್ಲೇ ಆಫ್~ ಪಂದ್ಯವನ್ನು 188-159 ರಲ್ಲಿ ಗೆದ್ದುಕೊಂಡು ಗಿರೀಶ್, ಎರಡನೇ ಪಂದ್ಯದಲ್ಲಿ 194-193 ರಲ್ಲಿ ಜಯ ಪಡೆದರು.ಇದಕ್ಕೂ ಮುನ್ನ ನಡೆದ ಲೀಗ್‌ನಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ಮೂಲಕ ಗಿರೀಶ್, ದಿನೇಶ್ ಕುಮಾರ್, ವಿ. ಓಂಕಾರ್ (ಕರ್ನಾಟಕ) ಮತ್ತು ಎನ್. ಸೆಂಥಿಲ್ (ತಮಿಳುನಾಡು) ಅವರು `ಪ್ಲೇ ಆಫ್~ನಲ್ಲಿ ಆಡಲು ಅರ್ಹತೆ ಗಿಟ್ಟಿಸಿಕೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.