ಟೆನ್‌ಪಿನ್ ಬೌಲಿಂಗ್: ಕರ್ನಾಟಕ ಚಾಂಪಿಯನ್

7

ಟೆನ್‌ಪಿನ್ ಬೌಲಿಂಗ್: ಕರ್ನಾಟಕ ಚಾಂಪಿಯನ್

Published:
Updated:

ಬೆಂಗಳೂರು: ಕರ್ನಾಟಕ ತಂಡ ಭಾನುವಾರ ಇಲ್ಲಿ ಕೊನೆಗೊಂಡ ಕೆನರಾ ಬ್ಯಾಂಕ್ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.ಒರಾಯನ್ ಮಾಲ್‌ನ `ಬ್ಲೂ ಒ' ಬೌಲಿಂಗ್ ಸೆಂಟರ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ತಂಡ ಒಟ್ಟು 40 ಪಾಯಿಂಟ್‌ಗಳನ್ನು ಕಲೆಹಾಕಿ ಅಗ್ರಸ್ಥಾನ ಪಡೆಯಿತು. ಕರ್ನಾಟಕ ಸತತ ಐದನೇ ಬಾರಿ ಸಮಗ್ರ ಪ್ರಶಸ್ತಿ ಜಯಿಸಿದೆ. ದೆಹಲಿ (17 ಪಾಯಿಂಟ್) ಮತ್ತು ತಮಿಳುನಾಡು (12) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡವು.ಅಂತಿಮ ದಿನ ಕರ್ನಾಟಕ `ಮಿಶ್ರ ತಂಡ' ವಿಭಾಗದ ಪ್ರಶಸ್ತಿ ಜಯಿಸಿತು. ಪ್ರತಿಮಾ ಹೆಗ್ಡೆ, ಹುನೇದ್ ಖೋಕರ್, ಗಿರೀಶ್ ಗಾಬಾ, ಆಕಾಶ್ ಅಶೋಕ್ ಮತ್ತು ಪರ್ವೇಜ್ ಅಹ್ಮದ್ ಅವರನ್ನೊಳಗೊಂಡ ತಂಡ 5738 ಪಾಯಿಂಟ್ ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry