ಟೆನ್‌ಪಿನ್ ಬೌಲಿಂಗ್: ದೀಕ್ಷಿತ್, ಶ್ವೇತಾಗೆ ಪ್ರಶಸ್ತಿ

7

ಟೆನ್‌ಪಿನ್ ಬೌಲಿಂಗ್: ದೀಕ್ಷಿತ್, ಶ್ವೇತಾಗೆ ಪ್ರಶಸ್ತಿ

Published:
Updated:
ಟೆನ್‌ಪಿನ್ ಬೌಲಿಂಗ್: ದೀಕ್ಷಿತ್, ಶ್ವೇತಾಗೆ ಪ್ರಶಸ್ತಿ

ಬೆಂಗಳೂರು: ಬಿ. ದೀಕ್ಷಿತ್ ಹಾಗೂ ಶ್ವೇತಾ ತಿವಾರಿ ಕರ್ನಾಟಕ ರಾಜ್ಯ ಟೆನ್‌ಪಿನ್ ಬೌಲಿಂಗ್ ಸಂಸ್ಥೆ ಆಶ್ರಯದಲ್ಲಿ ಕೊನೆಗೊಂಡ 21 ವರ್ಷದೊಳಗಿನವರ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.ಸ್ಟಾರ್ ಸಿಟಿ ಬೌಲಿಂಗ್ ಸೆಂಟರ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮಹಾಜನ್ ಕಾಲೇಜಿನ ದೀಕ್ಷಿತ್ 362-298ರಲ್ಲಿ ಎಸ್‌ಬಿಎಂ ಜೈನ್ ಕಾಲೇಜಿನ ಪ್ರಜ್ವಲ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಬಾಲಕಿಯರ ವಿಭಾಗದ ಅಂತಿಮ ಘಟ್ಟದ ಪಂದ್ಯದಲ್ಲಿ ಸೆಂಟರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ (ಸಿಎಂಎಸ್) ಶ್ವೇತಾ 237-234ರಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನ ವರ್ಷಾ ರಾಮಚಂದ್ರನ್ ಎದುರು ಗೆಲುವು ಪಡೆದರು.ಬಾಲಕರ ವಿಭಾಗದ ಸಿಂಗಲ್ಸ್ ಗೇಮ್‌ನಲ್ಲಿ ಹೆಚ್ಚು ಪಾಯಿಂಟ್ಸ್ ಗಳಿಸಿದ ದೀಕ್ಷಿತ್‌ಗೆ ವಿಶೇಷ ಬಹುಮಾನ ಲಭಿಸಿತು. ಬಾಲಕಿಯರಲ್ಲಿ ವರ್ಷಾ ಹಾಗೂ ಶ್ವೇತಾ ಜಂಟಿಯಾಗಿ ಬಹುಮಾನ ಹಂಚಿಕೊಂಡರು. ಇಬ್ಬರೂ ಸ್ಪರ್ಧಿಗಳು ತಲಾ 159 ಪಾಯಿಂಟ್ಸ್ ಕಲೆ ಹಾಕಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry