ಟೆನ್‌ಪಿನ್ ಬೌಲಿಂಗ್: ಮುನ್ನಡೆಯಲ್ಲಿ ಪ್ರಜ್ವಲ್

7

ಟೆನ್‌ಪಿನ್ ಬೌಲಿಂಗ್: ಮುನ್ನಡೆಯಲ್ಲಿ ಪ್ರಜ್ವಲ್

Published:
Updated:

ಬೆಂಗಳೂರು: ಎಸ್.ಡಿ. ಪ್ರಜ್ವಲ್ ಕರ್ನಾಟಕ ರಾಜ್ಯ ಟೆನ್‌ಪಿನ್ ಬೌಲಿಂಗ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ 21 ವರ್ಷದೊಳಗಿನವರ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಮೊದಲ ಸುತ್ತಿನ ಪಂದ್ಯದ ಅಂತ್ಯಕ್ಕೆ ಮುನ್ನಡೆ ಹೊಂದಿದ್ದಾರೆ.ಸ್ಟಾರ್ ಸಿಟಿ ಬೌಲಿಂಗ್ ಸೆಂಟರ್‌ನಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಪ್ರಜ್ವಲ್ ಒಟ್ಟು 382 ಪಾಯಿಂಟ್ ಕಲೆ ಹಾಕಿದರು.ಸೆಂಟರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಪ್ರತೀಕ್ ಸತ್ಯ (381) ಹಾಗೂ ಎಸ್‌ಬಿಎಂಜೆಸಿಯ ರುಚಿತ್ ಜೈನ್ (374) ಗಳಿಸಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನ ವರ್ಷಾ ರಾಮಚಂದ್ರನ್ 239 ಪಾಯಿಂಟ್ಸ್ ಕಲೆ ಹಾಕಿದ್ದಾರೆ. ಸಾಹಿತ್ಯ ಅರಸ್ (234) ಹಾಗೂ ಜೆ. ಮಾಳವಿಕ (212) ಕಲೆ ಹಾಕಿದರು.ನಾಲ್ಕು ದಿನಗಳ ಕಾಲ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಬಾಲಕರ ವಿಭಾಗದಲ್ಲಿ 148 ಹಾಗೂ ಬಾಲಕಿಯರ ವಿಭಾಗದಲ್ಲಿ 19 ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry