ಭಾನುವಾರ, ಮೇ 16, 2021
24 °C

ಟೆಲಿಕಾಂ ಕಂಪೆನಿಗಳ ಹೂಡಿಕೆ ರಕ್ಷಣೆಗೆ ಸರ್ಕಾರ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ ಕೆಲ ವಿದೇಶಿ ಟೆಲಿಕಾಂ ಸೇವಾ ಕಂಪೆನಿಗಳ ಪರವಾನಿಗೆ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಅವುಗಳ ಹೂಡಿಕೆ ರಕ್ಷಿಸಲು ದೂರ ಸಂಪರ್ಕ ಇಲಾಖೆ ಕಾನೂನು ತಜ್ಞರ ಸಲಹೆ ಪಡೆಯಲು ನಿರ್ಧರಿಸಿದೆ.ಅದರ ಜತೆ ಹಣಕಾಸು ಹಾಗೂ ವಿದೇಶಾಂಗ ಸಚಿವಾಲಯದ ಅಭಿಪ್ರಾಯವನ್ನು ದೂರ ಸಂಪರ್ಕ ಇಲಾಖೆ ಪಡೆಯಲಿದೆ. 2ಜಿ ಹಗರಣದಿಂದಾಗಿ  ಸುಪ್ರೀಂ ಕೋರ್ಟ್ ರದ್ದುಪಡಿಸಿದ 122 ಪರವಾನಿಗೆಗಳಲ್ಲಿ ವಿದೇಶಿ ಕಂಪೆನಿಗಳಾದ ಸಿಸ್ಟೆಮಾ ಹಾಗೂ ಟೆಲೆನಾರ್  ಸಹ ಸೇರಿದ್ದು, ಈ ಕಂಪೆನಿಗಳ ಹೂಡಿಕೆ ಹಿತಾಸಕ್ತಿ ರಕ್ಷಿಸಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.ಅರ್ಟಾನಿ ಜನರಲ್ ಅವರ ಜತೆ ಸಹ ಈ ವಿಷಯ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕ ವ್ಯವಹಾರಗಳ  ಇಲಾಖೆ , ಕಾನೂನು ವ್ಯವಹಾರಗಳ ಇಲಾಖೆ, ಕೈಗಾರಿಕಾ ವ್ಯವಹಾರಗಳ ಇಲಾಖೆಯ ಜತೆ ದೂರ ಸಂಪರ್ಕ ಇಲಾಖೆ ಈಗಾಗಲೇ ಚರ್ಚೆ ನಡೆಸಿದೆ ಎನ್ನಲಾಗಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.